×
Ad

ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ದೃಢಪಡಿಸಿದ ಚೀನಾ

Update: 2025-06-27 21:11 IST

PC : PTI 

ಬೀಜಿಂಗ್ : ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವನ್ನು ಚೀನಾ ಶುಕ್ರವಾರ ದೃಢಪಡಿಸಿದ್ದು ಅಮೆರಿಕವು ನಿರ್ಬಂಧ ಕ್ರಮಗಳನ್ನು ಸಡಿಲಿಸಲಿದೆ ಮತ್ತು ಚೀನಾ ರಫ್ತು ನಿಯಂತ್ರಣದ ಅಡಿಯಲ್ಲಿರುವ ವಸ್ತುಗಳನ್ನು ಪರಿಶೀಲಿಸುತ್ತದೆ ಮತ್ತು ಅನುಮೋದಿಸುತ್ತದೆ ಎಂದಿದೆ.

ಲಂಡನ್‌ನಲ್ಲಿ ಮಾತುಕತೆಯ ಬಳಿಕ ಎರಡೂ ಕಡೆಯ ತಂಡಗಳು ನಿಕಟ ಸಂವಹನವನ್ನು ಉಳಿಸಿಕೊಂಡಿದೆ. ಇತ್ತೀಚೆಗೆ, ಅನುಮೋದನೆಯೊಂದಿಗೆ ಎರಡೂ ಕಡೆಯವರು ಚೌಕಟ್ಟಿನ ವಿವರವನ್ನು ಮತ್ತಷ್ಟು ದೃಢಪಡಿಸಿದ್ದಾರೆ. ಚೀನಾವು ಕಾನೂನಿಗೆ ಅನುಸಾರವಾಗಿ ಅವಶ್ಯಕತೆಗಳನ್ನು ಪೂರೈಸುವ ರಫ್ತು ನಿಯಂತ್ರಣ ವಸ್ತುಗಳ ಅರ್ಜಿಯನ್ನು ಪರಿಶೀಲಿಸುತ್ತದೆ ಮತ್ತು ಅನುಮೋದಿಸುತ್ತದೆ. ಅದಕ್ಕೆ ಅನುಗುಣವಾಗಿ ಅಮೆರಿಕವು ಚೀನಾದ ವಿರುದ್ಧದ ನಿರ್ಬಂಧಿತ ಕ್ರಮಗಳ ಸರಣಿಯನ್ನು ರದ್ದುಗೊಳಿಸುತ್ತದೆ ಎಂದು ವಾಣಿಜ್ಯ ಸಚಿವಾಲಯದ ವಕ್ತಾರರು ಶುಕ್ರವಾರ ಹೇಳಿದ್ದಾರೆ.

ಅಮೆರಿಕಕ್ಕೆ ಅಪರೂಪದ ಭೂ ಖನಿಜಗಳ ಸಾಗಣೆಯನ್ನು ಚುರುಕುಗೊಳಿಸುವುದು ಸೇರಿದಂತೆ ಎರಡೂ ದೇಶಗಳ ನಡುವೆ ಸಹಮತ ಮೂಡಿದೆ ಎಂದು ಗುರುವಾರ ಶ್ವೇತಭವನದ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News