×
Ad

ಚೀನಾ: ನಾಪತ್ತೆಯಾಗಿದ್ದ ರಕ್ಷಣಾ ಸಚಿವ ವಜಾ

Update: 2023-10-25 00:11 IST

ಬೀಜಿಂಗ್: ಎರಡು ತಿಂಗಳಿಂದ ನಾಪತ್ತೆಯಾಗಿರುವ ರಕ್ಷಣಾ ಸಚಿವ ಜ ಲಿ ಶಾಂಗ್ಫುರನ್ನು ಸಚಿವ ಹುದ್ದೆಯಿಂದ, ಸರಕಾರದ ಉನ್ನತ ಸಮಿತಿ ಸದಸ್ಯತ್ವದಿಂದ ಮತ್ತು ಕೇಂದ್ರ ಮಿಲಿಟರಿ ಆಯೋಗದ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ ಎಂದು ಅಧ್ಯಕ್ಷ ಕ್ಸಿಜಿಂಪಿಂಗ್ ಅವರ ಕಚೇರಿಯ ಆದೇಶ ತಿಳಿಸಿದೆ.

ಇದರ ಜತೆಗೆ, ಮಾಜಿ ವಿದೇಶಾಂಗ ಸಚಿವ ಕ್ವಿನ್ ಗಾಂಗ್ರನ್ನೂ ಉನ್ನತ ಸಮಿತಿ ಸದಸ್ಯತ್ವದಿಂದ ವಜಾಗೊಳಿಸಿರುವುದಾಗಿ ಆದೇಶ ತಿಳಿಸಿದೆ. ಈ ಮಧ್ಯೆ, ಲಾನ್ ಫೊವಾನ್ರನ್ನು ನೂತನ ವಿತ್ತಸಚಿವರನ್ನಾಗಿ ನೇಮಿಸಲಾಗಿದೆ. 2018ರಿಂದ ವಿತ್ತಸಚಿವರಾಗಿದ್ದ ಲಿಯು ಕುನ್ರ ಸ್ಥಾನದಲ್ಲಿ ಫೊವಾನ್ ನೇಮಕಗೊಂಡಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News