×
Ad

ಚೀನಾ | ಕಾಮಗಾರಿ ಸಂದರ್ಭ ಭೂಕುಸಿತ ; 13 ಕಾರ್ಮಿಕರು ನಾಪತ್ತೆ

Update: 2024-12-05 21:26 IST

PC : timesofindia.

ಬೀಜಿಂಗ್: ಚೀನಾದ ವಾಣಿಜ್ಯ ಕೇಂದ್ರ ಶೆನ್‍ಝೆನ್‍ನಲ್ಲಿ ನಡೆಯುತ್ತಿರುವ ರೈಲು ಹಳಿ ಕಾಮಗಾರಿ ಸಂದರ್ಭ ಮಣ್ಣು ಜರಿದು 13 ಕಾರ್ಮಿಕರು ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ.

ಗುವಾಂಗ್‍ಡಾಂಗ್ ಪ್ರಾಂತದ ಬಾವೋನ್ ಜಿಲ್ಲೆಯ ಶೆನ್‍ಝೆನ್-ಜಿಯಾಂಗ್‍ಮೆನ್ ರೈಲ್ವೇ ವಲಯದಲ್ಲಿ ಬುಧವಾರ ತಡರಾತ್ರಿ ರೈಲ್ವೇ ಹಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಾಗ ರಸ್ತೆಯ ಒಂದು ಭಾಗ ಕುಸಿದಿದ್ದು 13 ಕಾರ್ಮಿಕರು ನಾಪತ್ತೆಯಾಗಿದ್ದು ಮಣ್ಣಿನ ರಾಶಿಯಡಿ ಸಿಲುಕಿದ್ದಾರೆಂದು ಶಂಕಿಸಲಾಗಿದೆ. ಶೋಧ ಕಾರ್ಯ ಮುಂದುವರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಮೀಪದ ಮನೆಯ ನಿವಾಸಿಗಳನ್ನು ಸ್ಥಳಾಂತರಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News