×
Ad

ಪಾಕ್, ಚೀನಾ ನೌಕಾಪಡೆಯಿಂದ ಅರಬಿ ಸಮುದ್ರದಲ್ಲಿ ಜಂಟಿ ಕಡಲ ಗಸ್ತು

Update: 2023-11-13 23:51 IST

Photo: www.brecorder.com 

ಬೀಜಿಂಗ್, ನ.13: ಚೀನಾ ಮತ್ತು ಪಾಕಿಸ್ತಾನದ ನೌಕಾಪಡೆಗಳು ಅರಬಿ ಸಮುದ್ರದಲ್ಲಿ ತಮ್ಮ ಮೊದಲ ಜಂಟಿ ಕಡಲ ಗಸ್ತು ಒಳಗೊಂಡಿರುವ ಅತೀ ದೊಡ್ಡ ನೌಕಾ ಸಮರಾಭ್ಯಾಸವನ್ನು ಪ್ರಾರಂಭಿಸಿವೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಮಾಧ್ಯಮ ಸೋಮವಾರ ವರದಿ ಮಾಡಿದೆ.

ಚೀನಾ-ಪಾಕಿಸ್ತಾನ ʼಸೀ ಗಾರ್ಡಿಯನ್ಸ್-3' ಜಂಟಿ ಕಡಲ ವ್ಯಾಯಾಮವು `ಸಾಗರ ಭದ್ರತೆಯ ಬೆದರಿಕೆಗೆ ಜಂಟಿ ಪ್ರತಿಕ್ರಿಯೆ' ಎಂಬ ವಿಷಯದೊಂದಿಗೆ ನವೆಂಬರ್ 11ರಂದು ಪಾಕಿಸ್ತಾನದ ಕರಾಚಿಯ ನೌಕಾನೆಲೆಯಲ್ಲಿ ಉತ್ತರ ಅರೆಬಿಯನ್ ಸಮುದ್ರದ ಕಡಲು ಮತ್ತು ಆಗಸ ಪ್ರದೇಶದಲ್ಲಿ ಆರಂಭಗೊಂಡಿದೆ ಎಂದು ವರದಿ ಹೇಳಿದೆ.

ಚೀನಾ ಮತ್ತು ಪಾಕಿಸ್ತಾನವು ತಮ್ಮ ಮೊದಲ ಜಂಟಿ ಕಡಲ ಗಸ್ತು ನಡೆಸಲಿವೆ. ಎರಡೂ ಕಡೆಯವರು ಪರಸ್ಪರ ವೀಕ್ಷಕರನ್ನು ಕಳುಹಿಸಲಿವೆ. ಚೀನಾದ ವೀಕ್ಷಕರು ಪಾಕಿಸ್ತಾನದ ಜಲಾಂತರ್ಗಾಮಿ ವಿರೋಧಿ ಗಸ್ತು ವಿಮಾನದೊಂದಿಗೆ ಸಮರಾಭ್ಯಾಸದಲ್ಲಿ ಭಾಗವಹಿಸುತ್ತಾರೆ. ನವೆಂಬರ್ 11ರಿಂದ 17ರವರೆಗೆ ಇದು ನಡೆಯಲಿದೆ ಎಂದು ಚೀನಾ ಮಿಲಿಟರಿಯ ಅಧಿಕೃತ ಸುದ್ಧಿಪೋರ್ಟಲ್ `ಚೀನಾ ಮಿಲಿಟರಿ ಆನ್‍ಲೈನ್' ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News