ಟ್ರಂಪ್ ಸುಂಕವನ್ನು ಲೇವಡಿ ಮಾಡುವ ವೀಡಿಯೊ ಪ್ರಸಾರ ಮಾಡಿದ ಚೀನಾ
ಡೊನಾಲ್ಡ್ ಟ್ರಂಪ್ | PC : NDTV
ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಸಮರವನ್ನು ಲೇವಡಿ ಮಾಡಿರುವ ಚೀನಾ, ನೃತ್ಯಮಾಡುವ ರೊಬೊಟ್‍ಗಳು ಹಾಗೂ ಆತಂಕದಿಂದ ನೋಡುತ್ತಿರುವ ಗ್ರಾಹಕರ ಎಐ ಆಧಾರಿತ ವೀಡಿಯೊಗಳನ್ನು ಪ್ರಸಾರ ಮಾಡಿದೆ.
`ಲಿಬರೇಷನ್ ಡೇ. ನೀವು ನಮಗೆ ನಕ್ಷತ್ರ ತಂದು ಕೊಡುವ ವಾಗ್ದಾನ ನೀಡಿದ್ದೀರಿ. ಆದರೆ ನಿಮ್ಮ ಸುಂಕಗಳು ಚೀನಾದ ಅಗ್ಗದ ಕಾರುಗಳನ್ನು ನಮ್ಮಿಂದ ಕಸಿದುಕೊಂಡಿವೆ' ಎಂದು ಚೀನಾದ ಸಿಜಿಟಿಎನ್ ಟಿವಿ ಪ್ರಸಾರ ಮಾಡಿದ ವೀಡಿಯೊದಲ್ಲಿ ಹೆಣ್ಣಿನ ಧ್ವನಿಯಲ್ಲಿ ಹಾಡು ಪ್ರಸಾರವಾಗಿದೆ. ಸರ್ಕಾರಿ ಸ್ವಾಮ್ಯದ ಕ್ಸಿನ್ ಹುವಾ ಸುದ್ದಿಸಂಸ್ಥೆಯು ಕೃತಕ ಬುದ್ಧಿಮತ್ತೆಯಿಂದ ರೂಪಿಸಿದ ರೊಬೊಟ್‍ಗೆ `ಟ್ಯಾರಿಫ್' ಎಂದು ಹೆಸರಿಸಿದೆ.
ಈ ಸಾಕ್ಷ್ಯಚಿತ್ರದಲ್ಲಿ ಟ್ಯಾರಿಫ್ ರೊಬೊಟ್, ಉನ್ನತ ತೆರಿಗೆ ಹೇರಬೇಕು ಎಂಬ ತನ್ನ ಮಾಲಕರ ಆದೇಶವನ್ನು ಪಾಲಿಸಲು ಒಪ್ಪದೆ ತನ್ನನ್ನು ತಾನು ನಾಶಪಡಿಸಿಕೊಳ್ಳುವುದನ್ನು ತೋರಿಸಲಾಗಿದೆ.
For many Americans, "Liberation Day," hailed by Trump's administration, means shrinking paychecks and rising costs. Tariffs hit, wallets quit: low-income families take the hardest blow. As the market holds its breath, the toll is already undeniable. #LiberationDay #CGTNOpinion pic.twitter.com/RzXFFVHoFg
— CGTN (@CGTNOfficial) April 3, 2025