ಇರಾನ್ ಮೇಲಿನ ದಾಳಿಯು ಯುಎನ್ ಸನ್ನದಿನ ಗಂಭೀರ ಉಲ್ಲಂಘನೆ: ಚೀನಾ
Update: 2025-06-22 21:08 IST
PC | PTI
ಬೀಜಿಂಗ್: ಇರಾನ್ ವಿರುದ್ಧ ಮತ್ತು ಅಂತರರಾಷ್ಟ್ರೀಯ ಅಣುಶಕ್ತಿ ಕೇಂದ್ರ(ಐಎಇಎ)ದ ಮೇಲ್ವಿಚಾರಣೆಯಲ್ಲಿರುವ ಅದರ ಪರಮಾಣು ಸ್ಥಾವರಗಳ ಮೇಲೆ ಅಮೆರಿಕದ ದಾಳಿಯನ್ನು ಚೀನಾ ಬಲವಾಗಿ ಖಂಡಿಸಿದೆ.
ಅಮೆರಿಕದ ಕ್ರಮವು ವಿಶ್ವಸಂಸ್ಥೆಯ ಸನ್ನದನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ ಮತ್ತು ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ತನ್ನ ವೆಬ್‌ಸೈಟ್‌ನಲ್ಲಿಯ ಹೇಳಿಕೆಯಲ್ಲಿ ತಿಳಿಸಿರುವ ಚೀನಾದ ವಿದೇಶಾಂಗ ಸಚಿವಾಲಯವು, ಸಾಧ್ಯವಾದಷ್ಟು ಶೀಘ್ರ ದಾಳಿಗಳನ್ನು ನಿಲ್ಲಿಸುವಂತೆ ಹಾಗೂ ಮಾತುಕತೆ ಮತ್ತು ಸಂಧಾನಗಳನ್ನು ಆರಂಭಿಸುವಂತೆ ಸಂಘರ್ಷದಲ್ಲಿ ತೊಡಗಿರುವ ದೇಶಗಳಿಗೆ,ವಿಶೇಷವಾಗಿ ಇಸ್ರೇಲ್‌ಗೆ ಆಗ್ರಹಿಸಿದೆ.