×
Ad

ಚೀನಾ ಶಿಶುವಿಹಾರದಲ್ಲಿ ಚೂರಿ ಇರಿತ: 3 ಮಕ್ಕಳ ಸಹಿತ 6 ಮಂದಿ ಮೃತ್ಯು

Update: 2023-07-10 22:57 IST

PHOTO : timesofindia.indiatimes.com

ಬೀಜಿಂಗ್: ದಕ್ಷಿಣ ಚೀನಾದ ಗ್ವಾಂಗ್ಡಾಂಗ್ ಪ್ರಾಂತದಲ್ಲಿನ ಶಿಶುವಿಹಾರದಲ್ಲಿ ಸೋಮವಾರ ಚೂರಿ ಇರಿತದಿಂದ ಮೂವರು ಮಕ್ಕಳ ಸಹಿತ 6 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಲಿಜಿಯಾಂಗ್ ನಗರದಲ್ಲಿನ ಶಿಶುವಿಹಾರದಲ್ಲಿ ದುಷ್ಕರ್ಮಿ ಚೂರಿಯಿಂದ ಏಕಾಏಕಿ ದಾಳಿ ನಡೆಸಿದಾಗ ಒಬ್ಬ ಶಿಕ್ಷಕಿ, ಇಬ್ಬರು ಪೋಷಕರು ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಇದು ಉದ್ದೇಶಪೂರ್ವಕ ದಾಳಿಯಾಗಿದ್ದು ಶಂಕಿತ ಆರೋಪಿ, 25 ವರ್ಷದ ವು ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ದಾಳಿಗೆ ಕಾರಣವೇನೆಂಬುದು ಸ್ಪಷ್ಟವಾಗಿಲ್ಲ ಎಂದು ಲಿಜಿಯಾಂಗ್ ಪೊಲೀಸ್ ವಕ್ತಾರರು ಹೇಳಿದ್ದಾರೆ. ಚೀನಾದಲ್ಲಿ ಬಂದೂಕು ಲೈಸೆನ್ಸ್ಗೆ ಬಿಗಿ ನಿಯಮವಿರುವುದರಿಂದ ಗುಂಡಿನ ದಾಳಿ ಪ್ರಕರಣ ಅಪರೂಪವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚೂರಿ ಇರಿತದ ಪ್ರಕರಣಗಳು ಹೆಚ್ಚುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News