×
Ad

ಪಾಕ್ : ಆತ್ಮಾಹುತಿ ಬಾಂಬ್ ದಾಳಿ | 5 ಚೀನೀ ಪ್ರಜೆಗಳ ಸಾವು

Update: 2024-03-26 21:45 IST

ಸಾಂದರ್ಭಿಕ ಚಿತ್ರ | Photo : NDTV

ಇಸ್ಲಾಮಾಬಾದ್: ವಾಯವ್ಯ ಪಾಕಿಸ್ತಾನದಲ್ಲಿ ಮಂಗಳವಾರ ಚೀನಾದ ಇಂಜಿನಿಯರ್ಗಳ ತಂಡ ಸಾಗುತ್ತಿದ್ದ ವಾಹನಗಳನ್ನು ಗುರಿಯಾಗಿಸಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 5 ಚೀನೀ ಪ್ರಜೆಗಳ ಸಹಿತ 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಇಸ್ಲಾಮಾಬಾದ್ ನಿಂದ ಖೈಬರ್ ಪಖ್ತೂಂಕ್ವಾ ಪ್ರಾಂತದ ದಸ್ಸು ನಗರದಲ್ಲಿ ಜಲವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಚೀನೀ ಇಂಜಿನಿಯರ್ಗಳು ಇಸ್ಲಾಮಾಬಾದ್ ಗೆ ಪ್ರಯಾಣಿಸುತ್ತಿದ್ದಾಗ ಬೆಷಾಮ್ ನಗರದ ಬಳಿ ವಾಹನದ ಸಾಲಿನ ಮೇಲೆ ಸ್ಫೋಟಕಗಳು ತುಂಬಿದ್ದ ವಾಹನವನ್ನು ಆತ್ಮಾಹುತಿ ಬಾಂಬರ್ ಅಪ್ಪಳಿಸಿದ್ದಾನೆ. ಸ್ಫೋಟದಲ್ಲಿ 5 ಚೀನೀ ಇಂಜಿನಿಯರ್ಗಳು ಹಾಗೂ ವಾಹನವನ್ನು ಚಲಾಯಿಸುತ್ತಿದ್ದ ಪಾಕಿಸ್ತಾನಿ ಪ್ರಜೆ ಸಾವನ್ನಪ್ಪಿದ್ದಾರೆ. ಈ ದಾಳಿಯ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಮುಹಮ್ಮದ್ ಆಲಿ ಗಂದಾಪುರ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News