×
Ad

ಹಾರ್ವರ್ಡ್ ವಿವಿ ಅನುದಾನ ಕಡಿತಗೊಳಿಸಿದ್ದ ಟ್ರಂಪ್ ಕ್ರಮಕ್ಕೆ ನ್ಯಾಯಾಲಯ ತಡೆ

Update: 2025-09-04 10:01 IST

PC: PTI

ವಾಷಿಂಗ್ಟನ್: ಹಾರ್ವರ್ಡ್ ವಿಶ್ವವಿದ್ಯಾನಿಲಯಕ್ಕೆ ನೀಡಬೇಕಿದ್ದ 260 ಕೋಟಿ ಡಾಲರ್ ಗಳ ಫೆಡರಲ್ ಸಂಶೋಧನಾ ಅನುದಾನಕ್ಕೆ ಕತ್ತರಿ ಹಾಕಿದ್ದ ಡೊನಾಲ್ಡ್ ಟ್ರಂಪ್ ಆಡಳಿತದ ಕ್ರಮವನ್ನು ನ್ಯಾಯಾಲಯ ಕಾನೂನು ಬಾಹಿರ ಎಂದು ಘೋಷಿಸಿದ್ದು, ಇದರಿಂದ ವಿಶ್ವದ ಪ್ರತಿಷ್ಠಿತ ವಿವಿ ಎರಡನೇ ಕಾನೂನು ಸಮರ ಜಯಿಸಿದಂತಾಗಿದೆ.

ಅಮೆರಿಕದ ಜಿಲ್ಲಾ ನ್ಯಾಯಾಧೀಶೆ ಅಲಿಸನ್ ಬರೋಫ್ಸ್ ಈ ತೀರ್ಪು ನೀಡಿದ್ದು, "ಇವಿ ಲೀಗ್ ಸ್ಕೂಲ್ ನ ಆಡಳಿತ ಮತ್ತು ನೀತಿಯನ್ನು ಬದಲಾವಣೆ ಮಾಡಿಕೊಳ್ಳುವಂತೆ ಶ್ವೇತಭವನ ಮಾಡಿದ್ದ ಆಗ್ರಹವನ್ನು ತಿರಸ್ಕರಿಸಿದ್ದಕ್ಕಾಗಿ ಅನುದಾನಕ್ಕೆ ಕತ್ತರಿ ಹಾಕಿದ ಟ್ರಂಪ್ ಆಡಳಿತದ ಕ್ರಮ ಕಾನೂನು ಬಾಹಿರ ಪ್ರತೀಕಾರವಾºಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾರ್ವರ್ಡ್ ಜತೆಗಿನ ಸಂಘರ್ಷ ಉಲ್ಬಣಗೊಂಡ ಹಿನ್ನೆಲೆಯಲ್ಲಿ ವಿವಿಗೆ ನೀಡಬೇಕಿದ್ದ ಸರಣಿ ಅನುದಾನ ಸ್ಥಗಿತಗೊಳಿಸಿದ ಟ್ರಂಪ್ ಆಡಳಿತದ ನಿರ್ಧಾರವನ್ನು ಈ ತೀರ್ಪು ಅನೂರ್ಜಿತಗೊಳಿಸಿದೆ. ಈ ತೀರ್ಪು ಅನುಷ್ಠಾನಗೊಂಡಲ್ಲಿ ವಿವಿಯ ನೂರಾರು ಸಂಶೋಧನಾ ಯೋಜನೆಗಳಿಗೆ ಟ್ರಂಪ್ ಆಡಳಿತ ಅನುದಾನವನ್ನು ಪುನಃಸ್ಥಾಪನೆ ಮಾಡಬೇಕಾಗುತ್ತದೆ.

ಹಾರ್ವರ್ಡ್ ವಿವಿ ಕ್ಯಾಂಪಸ್ ನ ಆಡಳಿತವನ್ನು ನಿರ್ವಹಿಸುವ ಕೈಗಳನ್ನು ಟ್ರಂಪ್ ಆಡಳಿತ ಕಟ್ಟಿಹಾಕಿದೆ; ಆದರೆ ತಾರತಮ್ಯದ ವಿರುದ್ಧದ ಹೋರಾಟಕ್ಕೆ ವಿವಿ ನಡೆಸಿರುವ ಪ್ರಯತ್ನಗಳಿಗೂ ಅನುದಾನಕ್ಕೆ ಕತ್ತರಿ ಹಾಕಿರುವುದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಇದು ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳ ಮೇಲೆ ನಿಗದಿತ ಗುರಿ ಮಾಡಲ್ಪಟ್ಟ, ಸೈದ್ಧಾಂತಿಕ ದಾಳಿಯಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News