×
Ad

ಆಗ್ನೇಯ ಏಶ್ಯದಲ್ಲಿ ಮತ್ತೆ ಕೋವಿಡ್ ಹಾವಳಿ

Update: 2025-05-20 21:23 IST

ಸಾಂದರ್ಭಿಕ ಚಿತ್ರ | PTI 

ಹೊಸದಿಲ್ಲಿ: ಕೋವಿಡ್‌19 ಸಾಂಕ್ರಾಮಿಕದ ಹಾವಳಿಯು ಆಗ್ನೇಯ ಏಶ್ಯದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಜನನಿಬಿಡ ಪ್ರಾಂತಗಳಾದ ಹಾಂಕಾಂಗ್, ಸಿಂಗಾಪುರ, ಚೀನಾ ಹಾಗೂ ಥೈಲ್ಯಾಂಡ್ ದೇಶಗಳಲ್ಲಿ ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ವರದಿಯಾಗಿವೆ.

ಹಾಂಕಾಂಗ್, ಸಿಂಗಾಪುರದಂತಹ ಪ್ರಮುಖ ನಗರಗಳಲ್ಲಿ ಆರೋಗ್ಯ ಇಲಾಖೆಯ ಸೋಂಕಿನ ವಿರುದ್ಧ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಚೀನಾ ಹಾಗೂ ಥೈಲ್ಯಾಂಡ್ ದೇಶಗಳು, ಸೋಂಕು ಬಾರದಂತೆ ತಡೆಗಟ್ಟಲು ನೂತನ ಬೂಸ್ಟರ್ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿವೆ.

ಮೇ 3ರಂದು ಕೊನೆಗೊಂಡ ವಾರದಲ್ಲಿ ಹಾಂಕಾಂಗ್‌ ನಲ್ಲಿ 31 ಕೋವಿಡ್‌19 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ 12 ತಿಂಗಳುಗಳಲ್ಲೇ ಗರಿಷ್ಠವಾಗಿದೆ. ಸಿಂಗಾಪುರದಲ್ಲಿ ಮೇ 3ರಂದು ಕೊನೆಗೊಂಡ ವಾರದಲ್ಲಿ 14,200 ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಒಂದು ವರ್ಷದಲ್ಲಿ ಶೇ.28ರಷ್ಟು ಏರಿಕೆಯಾದಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News