×
Ad

" No Kings" ಘೋಷಣೆಯೊಂದಿಗೆ ಅಮೆರಿಕದ ಬೀದಿ ಬೀದಿಗಳಲ್ಲಿ ಸಾವಿರಾರು ಜನರಿಂದ ಟ್ರಂಪ್ ವಿರುದ್ಧ ಪ್ರತಿಭಟನೆ

Update: 2025-06-15 00:37 IST

ವಾಷಿಂಗ್ಟನ್: ಅಮೆರಿಕದಲ್ಲಿ ಟ್ರಂಪ್ ಆಡಳಿತದ ವಿರುದ್ಧದ ಜನಾಕ್ರೋಶ ಮುಗಿಲು ಮುಟ್ಟಿದ್ದು, ಶನಿವಾರ ಸಾವಿರಾರು ಮಂದಿ ದೇಶಾದ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸೇನೆಯ 250ನೇ ವರ್ಷಾಚರಣೆ ಮತ್ತು ತಮ್ಮ 79ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ವಾಷಿಂಗ್ಟನ್ ನಲ್ಲಿ ಬೃಹತ್ ಸೇನಾ ಪರೇಡ್ ನಡೆಸುವ ಸಿದ್ಧತೆಯಲ್ಲಿ ಟ್ರಂಪ್ ಇರುವ ಇರುವ ನಡುವೆಯೇ "No Kings" ಎಂಬ ಬ್ಯಾನರ್ ನಡಿ ಪ್ರತಿಭಟನೆ ತೀವ್ರಗೊಂಡಿದೆ.

ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುವ ಉದ್ದೇಶ ಹೊಂದಿದ್ದ ಪ್ರತಿಭಟನಾಕಾರರು ದೊಡ್ಡ ನಗರಗಳಿಂದ ಹಿಡಿದು ಸಣ್ಣ ಪಟ್ಟಣ, ಪಾರ್ಕ್ ಗಳು ಸೇರಿದಂತೆ ದೇಶಾದ್ಯಂತ 2000 ಕಡೆಗಳಲ್ಲಿ ಪ್ರತಿಭಟನೆ ನಡೆಸಿದರು. ಫಿಲಿಡೆಲ್ಫಿಯಾದ ಲವ್ ಪಾರ್ಕ್ ನಲ್ಲಿ ತುಂತುರು ಮಳೆಯ ನಡುವೆಯೂ ಪ್ರತಿಭಟನೆಯ ಸಂಕೇತವನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು ಹಾಗೂ ವೈಎಂಸಿಎ ಪದ್ಯಗಳನ್ನು ತಿರುಚಿ ಪ್ರತಿಭಟನಾ ಗೀತೆಯಾಗಿ ಹಾಡಿದರು. "ಮಿತ ಜನತಂತ್ರದ ವಿರುದ್ಧ ಹೋರಾಡಿ" ಮತ್ತು "ಮಿನಿ ಮುಸಲೋನಿಗಳನ್ನು ಗಡೀಪಾರು ಮಾಡಿ" ಎಂಬ ಘೋಷಣೆಗಳು ಕೇಳಿಬಂದವು. " 

ಪ್ರತಿಭಟನೆಯಲ್ಲಿ ಭಾಗವಹಿಸಲು ಹುಟ್ಟೂರು ಫಿಲಿಡೆಲ್ಫಿಯಾಗೆ ಮೆರಿಲ್ಯಾಂಡ್ ನಿಂದ ಆಗಮಿಸಿದ್ದ 61 ವರ್ಷ ವಯಸ್ಸಿನ ಕರೆನ್ ವನ್ ಟ್ರೀಸ್ಟ್ "ಇದು ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳುವ ಹೋರಾಟ" ಎಂದು ಬಣ್ಣಿಸಿದರು. ಈ ಆಡಳಿತದಲ್ಲಿ ಬಹಳಷ್ಟು ತಪ್ಪುಗಳು ನಡೆಯುತ್ತಿವೆ ಎಂದು ಹೇಳಿದರು.

ಅಟ್ಲಾಂಟದಲ್ಲಿ 5000 ಮಂದಿ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದರು. ಲಾಸ್ ಏಂಜಲೀಸ್ ಸಿಟಿ ಹಾಲ್ ಎದುರು ಡೋಲುಗಳನ್ನು ಬಾರಿಸಿ ಪ್ರತಿಭಟನೆ ನಡೆದರೆ, ಚಾರ್ಲೋಟ್, ಉತ್ತರ ಕೊರಾಲಿನಾದಲ್ಲಿ "ನಮಗೆ ರಾಜರಿಲ್ಲ" ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News