×
Ad

ಯೆಮನ್ ರಾಜಧಾನಿಯ ಮೇಲೆ ಇಸ್ರೇಲ್ ದಾಳಿಯಲ್ಲಿ ಮೃತರ ಸಂಖ್ಯೆ 6ಕ್ಕೆ ಏರಿಕೆ

Update: 2025-08-25 22:18 IST

PC : X \ @officialrnintel

ಸನಾ, ಆ.25: ಯೆಮನ್ ರಾಜಧಾನಿ ಸನಾದ ಮೇಲೆ ರವಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದ್ದು ಇತರ 86 ಮಂದಿ ಗಾಯಗೊಂಡಿರುವುದಾಗಿ ಹೌದಿ ಬಂಡುಕೋರರ ಮೂಲಗಳು ಸೋಮವಾರ ಹೇಳಿವೆ.

ಹೌದಿಗಳು ಇಸ್ರೇಲ್‍ ನತ್ತ ಕ್ಲಸ್ಟರ್ ಬಾಂಬ್ ಪ್ರಯೋಗಿಸಿದ್ದಕ್ಕೆ ಪ್ರತಿಯಾಗಿ ಅಸಾರ್ ಮತ್ತು ಹಿಝಾಜ್ ವಿದ್ಯುತ್ ಸ್ಥಾವರಗಳನ್ನು ಹಾಗೂ ಅಧ್ಯಕ್ಷರ ಭವನದ ಸಮೀಪವಿದ್ದ ಮಿಲಿಟರಿ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿದ್ದು ವ್ಯಾಪಕ ಹಾನಿ ಸಂಭವಿಸಿರುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News