×
Ad

ಕೆನಡಾ : ಕೇಜ್ರಿವಾಲ್ ಬಂಧನ ವಿರೋಧಿಸಿ ಭಾರತೀಯ ಕಾನ್ಸುಲೇಟ್ ಎದುರು ಪ್ರತಿಭಟನೆ

Update: 2024-03-23 23:03 IST

Photo : X/@sudeep_singla

ಟೊರಂಟೊ : ದಿಲ್ಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷ(ಆಪ್)ದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರೀವಾಲ್‍ ರ ಬಂಧನವನ್ನು ವಿರೋಧಿಸಿ ಆಪ್ ಬೆಂಬಲಿಗರು ಕೆನಡಾದ ಟೊರಂಟೊದಲ್ಲಿ ಭಾರತೀಯ ದೂತಾವಾಸದ ಎದುರು ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.

ಪ್ರತಿಭಟನೆಯ ನೇತೃತ್ವವನ್ನು ಕೆನಡಾದಲ್ಲಿ ಆಪ್ ಕಾರ್ಯಕರ್ತನಾಗಿರುವ ಸುದೀಪ್ ಸಿಂಗ್ಲಾ ವಹಿಸಿದ್ದರು. `ಕೇಜ್ರಿವಾಲ್ ಬಂಧನದಿಂದ ಕೆನಡಾದಲ್ಲಿರುವ ಆಪ್ ಕಾರ್ಯಕರ್ತರು ಕಳವಳಗೊಂಡಿದ್ದಾರೆ. ನರೇಂದ್ರ ಮೋದಿ ಸರಕಾರದ ಈ ಕಠೋರ ಕ್ರಮಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿಗ್ರಹಿಸುತ್ತವೆ ಮತ್ತು ಸರ್ವಾಧಿಕಾರದತ್ತ ಸಾಗುತ್ತಿರುವುದನ್ನು ಸೂಚಿಸುತ್ತವೆ. ಕೇಜ್ರೀವಾಲ್‍ರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದ ಮನವಿಯನ್ನು ಕಾನ್ಸುಲೇಟ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಮುಂದಿನ ಬೆಳವಣಿಗೆಯನ್ನು ಕಾದು ನೋಡುತ್ತೇವೆ. ಕೇಜ್ರೀವಾಲ್‍ರ ಬಿಡುಗಡೆಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳದಿದ್ದರೆ ಆಪ್ ಪಕ್ಷದ ಉತ್ತರ ಅಮೆರಿಕ ಘಟಕದ ನೇತೃತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರತಿಭಟನೆ ಆಯೋಜಿಸಲಾಗುವುದು' ಎಂದವರು ಹೇಳಿದ್ದಾರೆ.

ಕಾನ್ಸುಲೇಟ್ ಕಚೇರಿಯ ಆವರಣ ಪ್ರವೇಶಿಸಲು ಮುಂದಾದ ಪ್ರತಿಭಟನಾಕಾರರನ್ನು ಭದ್ರತಾ ಪಡೆಯವರು ತಡೆದರು ಎಂದು ವರದಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News