×
Ad

ಝೆಲೆನ್‍ಸ್ಕಿ ರಶ್ಯ ಶಾಂತಿ ಮಾತುಕತೆಯ ಭಾಗವಾಗಲಿದ್ದಾರೆ: ಡೊನಾಲ್ಡ್ ಟ್ರಂಪ್

Update: 2025-02-17 21:19 IST

   ಡೊನಾಲ್ಡ್ ಟ್ರಂಪ್ , ಝೆಲೆನ್‍ಸ್ಕಿ | PC : NDTV 

ವಾಷಿಂಗ್ಟನ್: ರಶ್ಯದ ಜತೆಗಿನ ಶಾಂತಿ ಮಾತುಕತೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಕೂಡಾ ಪಾಲ್ಗೊಳ್ಳಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಫ್ಲೋರಿಡಾದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಟ್ರಂಪ್ ` ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ಇಬ್ಬರೂ ತನ್ನೊಂದಿಗೆ ಪ್ರತ್ಯೇಕ ಫೋನ್ ಕರೆಗಳಲ್ಲಿ ಶಾಂತಿಯ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಮಾತುಕತೆಯಲ್ಲಿ ಉಕ್ರೇನ್ ಅಧ್ಯಕ್ಷರೂ ಪಾಲ್ಗೊಳ್ಳಲಿದ್ದಾರೆ' ಎಂದು ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷರು ಈ ವಾರ ಸೌದಿ ಅರೆಬಿಯಾದಲ್ಲಿ ನಡೆಯುವ ಪೂರ್ವಭಾವಿ ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಾರೆಯೇ ಅಥವಾ ಮುಂದಿನ ದಿನಗಳಲ್ಲಿ ನಡೆಯುವ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇದಕ್ಕೂ ಮುನ್ನ , ಶಾಂತಿ ಮಾತುಕತೆಯಲ್ಲಿ ಝೆಲೆನ್‍ಸ್ಕಿ ಪಾಲ್ಗೊಳ್ಳುತ್ತಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್ಸ್ ನೇರ ಉತ್ತರ ನೀಡದೆ ` ಅಮೆರಿಕದ ಬೆಂಬಲಕ್ಕೆ ಪ್ರತಿಯಾಗಿ ಉಕ್ರೇನ್‌ ನ ಖನಿಜ ಸಂಪತ್ತಿನಲ್ಲಿ ಅರ್ಧ ಪಾಲು ಪಡೆಯುವ ಟ್ರಂಪ್ ಅವರ ಪ್ರಸ್ತಾವಿತ ಒಪ್ಪಂದವನ್ನು ಉಕ್ರೇನ್ ಅಧ್ಯಕ್ಷರು ಒಪ್ಪಿಕೊಂಡರೆ ಜಾಣ ನಡೆಯಾಗುತ್ತದೆ' ಎಂದು ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ. ಉಕ್ರೇನ್ ಉಳಿವಿಗೆ ಅಮೆರಿಕದ ಬೆಂಬಲ ಅತ್ಯಗತ್ಯ ಎಂಬ ಝೆಲೆನ್‍ಸ್ಕಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ` ಈ ಒಪ್ಪಂದವೇ ಒಂದು ರಕ್ಷಣೆಯಾಗಿದೆ. ಟ್ರಂಪ್ ಅವರೊಂದಿಗೆ ಸಹಹೂಡಿಕೆ ಮಾಡುವುದಕ್ಕಿಂತ ಉತ್ತಮ ಭದ್ರತಾ ಖಾತರಿಯನ್ನು ಯೋಚಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News