ಹಮಾಸ್‍ಗೆ `ಅಂತಿಮ ಎಚ್ಚರಿಕೆ' ನೀಡಿದ ಡೊನಾಲ್ಡ್ ಟ್ರಂಪ್
Update: 2025-09-08 21:23 IST
ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್, ಸೆ.8: ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಝಾ ಯುದ್ಧ ಕೊನೆಗೊಳ್ಳಲು ಪ್ರತಿಯೊಬ್ಬರೂ ಬಯಸುತ್ತಿದ್ದಾರೆ. ನನ್ನ ಪ್ರಸ್ತಾಪಕ್ಕೆ ಇಸ್ರೇಲ್ ಒಪ್ಪಿದೆ. ಇದೀಗ ಹಮಾಸ್‍ನ ಸರದಿ. ಇದು ಅವರಿಗೆ ಅಂತಿಮ ಎಚ್ಚರಿಕೆಯಾಗಿದ್ದು ಇನ್ನು ಯಾವುದೇ ಅವಕಾಶ ನೀಡುವುದಿಲ್ಲ. ಪ್ರಸ್ತಾಪವನ್ನು ಒಪ್ಪದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಮಧ್ಯೆ, ಮಧ್ಯಪ್ರಾಚ್ಯ, ಮಧ್ಯ ಮತ್ತು ದಕ್ಷಿಣ ಏಶ್ಯಾದಲ್ಲಿ ಅಮೆರಿಕದ ಹಿತಾಸಕ್ತಿಯನ್ನು ರಕ್ಷಿಸುವ `ಸೆಂಟ್‍ಕಾಮ್'ನ ಅಧಿಕಾರಿ ಅಡ್ಮಿರಲ್ ಬ್ರಾಡ್ ಕೂಪರ್ ಶನಿವಾರ ಇಸ್ರೇಲ್‍ಗೆ ಭೇಟಿ ನೀಡಿ ಇಸ್ರೇಲ್ ರಕ್ಷಣಾ ಪಡೆಗಳ ಮುಖ್ಯಸ್ಥ ಲೆ|ಜ| ಇಯಾಲ್ ಝಮೀರ್ ಜೊತೆ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.