×
Ad

ಜಪಾನ್‍ ಗೆ 35% ಸುಂಕ; ಡೊನಾಲ್ಡ್ ಟ್ರಂಪ್ ಬೆದರಿಕೆ

Update: 2025-07-02 20:39 IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo credit: PTI)

ವಾಷಿಂಗ್ಟನ್: ಜಪಾನ್‍ ನಿಂದ ಅಮೆರಿಕಕ್ಕೆ ರಫ್ತಿನ ಪ್ರಮಾಣ ಆಮದಿಗಿಂತ ಬಹಳ ಹೆಚ್ಚಿರುವುದರಿಂದ ಜಪಾನ್ ವಿರುದ್ಧ 35%ದವರೆಗೆ ಸುಂಕ ವಿಧಿಸಬಹುದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಜಪಾನಿನೊಂದಿಗೆ ವ್ಯಾಪಾರ ಒಪ್ಪಂದದ ಬಗ್ಗೆ ನನಗೆ ಖಾತರಿಯಿಲ್ಲ. ಅವರು ಕಠಿಣ ನಿಲುವು ತಳೆದಿದ್ದಾರೆ. ಆದ್ದರಿಂದ ಅವರು 30% ಅಥವಾ 35% ಸುಂಕ ಪಾವತಿಸಬೇಕು' ಎಂದು ಟ್ರಂಪ್ ಹೇಳಿದ್ದು ಜಪಾನ್ ವಿರುದ್ಧ ಈಗ ಚಾಲ್ತಿಯಲ್ಲಿರುವ 24% ಸುಂಕದ ಪ್ರಮಾಣ ಹೆಚ್ಚುವ ಸುಳಿವು ನೀಡಿದ್ದಾರೆ. ಈ ಮಧ್ಯೆ, ಜಪಾನ್ ವ್ಯಾಪಾರ ಮಾತುಕತೆಗೆ ಸಿದ್ಧ. ಎರಡೂ ದೇಶಗಳಿಗೆ ಸಮಾಧಾನಕರ ರೀತಿಯಲ್ಲಿ ವ್ಯಾಪಾರ ಒಪ್ಪಂದ ಏರ್ಪಡಬೇಕು ಎಂದು ಪ್ರಧಾನಿ ಶಿಗೆರು ಇಷಿಬಾ ಸರಕಾರ ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News