ಕೆನಡಾ ಮೇಲಿನ 50% ಸುಂಕಕ್ಕೆ ತಾತ್ಕಾಲಿಕ ತಡೆ : ಡೊನಾಲ್ಡ್ ಟ್ರಂಪ್
Update: 2026-08-19 20:27 IST
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಆ.19: ಅಮೆರಿಕ ಮತ್ತು ಕೆನಡಾ ನಡುವೆ ಮಂಗಳವಾರ ಸಹಮತ ಮೂಡಿದ ಹಿನ್ನೆಲೆಯಲ್ಲಿ, ಕೆನಡಾದ ಆಮದುಗಳ ಮೇಲೆ ವಿಧಿಸಲು ಉದ್ದೇಶಿಸಲಾಗಿದ್ದ 50% ಸುಂಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಅಲ್ಲದೆ, ಒಪ್ಪಂದವನ್ನು ಅಂತಿಮಗೊಳಿಸಲು ಮೂರು ದಿನಗಳ ಹೆಚ್ಚುವರಿ ಸಮಯ ನೀಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸುಮಾರು 20 ಶತಕೋಟಿ ಮೌಲ್ಯದ ಸರಕುಗಳ ಮೇಲೆ ಬೀಳಲಿದ್ದ ಈ ಸುಂಕಗಳು ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ ಬರಬೇಕಿತ್ತು. `ಬುಧವಾರ ಬೆಳಿಗ್ಗೆಯಿಂದ ಜಾರಿಗೆ ಬರಬೇಕಿದ್ದ ಕೆನಡಾ ಮೇಲಿನ 50% ಸುಂಕವನ್ನು ನಾನು ಮೂರು ದಿನಗಳ ಅವಧಿಗೆ ತಡೆಹಿಡಿದಿದ್ದೇನೆ. ಕೆನಡಾ ಮತ್ತು ಅಮೆರಿಕ ನಡುವೆ ದಾಖಲೆಗಳ ಅಂತಿಮಗೊಳಿಸುವಿಕೆಗೆ ಒಳಪಟ್ಟು ಒಪ್ಪಂದವಾಗಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.