ಅಮೆರಿಕದ ಮಿಲಿಟರಿಗೆ ಸಹಾಯ ಮಾಡದಂತೆ ಗಲ್ಫ್ ದೇಶಗಳಿಗೆ ಇರಾನ್ ಎಚ್ಚರಿಕೆ

Update: 2026-08-19 20:23 IST

 ಅಲಿ ಅಬ್ದುಲ್ಲಾಹಿ | Photo Credit : PTI  

ಟೆಹರಾನ್: ಅಮೆರಿಕದ ಮಿಲಿಟರಿಗೆ ಸಹಾಯ ಮಾಡುವುದು ಅಮೆರಿಕದ ಮಿಲಿಟರಿ ಕಾರ್ಯಾಚರಣೆಗೆ ಸೇರ್ಪಡೆಗೊಂಡಂತೆ ಎಂದು ಇರಾನ್‍ನ ಸಶಸ್ತ್ರ ಪಡೆಗಳು ಬುಧವಾರ ಗಲ್ಫ್ ದೇಶಗಳಿಗೆ ಎಚ್ಚರಿಕೆ ನೀಡಿವೆ.

ಆಕ್ರಮಣಕಾರಿ ಅಮೆರಿಕ ಮಿಲಿಟರಿಗೆ ನೀಡಲಾಗುವ ಯಾವುದೇ ಸಹಾಯ ಅಥವಾ ಸೌಲಭ್ಯವು ಅಮೆರಿಕದ ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದಂತೆ ಎಂದು ನಾವು ಎಚ್ಚರಿಸಲು ಬಯಸುತ್ತೇವೆ. ಆತಿಥೇಯ ದೇಶಗಳ ಅರಿವಿಲ್ಲದೆ ಪ್ರಾದೇಶಿಕ ನೆಲೆಗಳಲ್ಲಿ ಇಷ್ಟೊಂದು ಹೆಚ್ಚಿನ ಸಂಖ್ಯೆಯ ಮಿಲಿಟರಿ ವಿಮಾನಗಳು, ವಿಶೇಷವಾಗಿ ಇಂಧನ ಮರುಪೂರಣ ವಿಮಾನಗಳು ಇರಲು ಸಾಧ್ಯವಿಲ್ಲ' ಎಂದು ಇರಾನ್‍ನ ಸಶಸ್ತ್ರ ಪಡೆಗಳ ಮುಖ್ಯಸ್ಥ ಅಲಿ ಅಬ್ದುಲ್ಲಾಹಿ ಹೇಳಿರುವುದಾಗಿ `ಮೆಹ್ರ್' ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News