×
Ad

ಕೆನಡಾದ ದೇವಸ್ಥಾನಗಳಿಗೆ ಭಾರತೀಯ ರಾಜತಾಂತ್ರಿಕರನ್ನು ಕಳಿಸಬೇಡಿ : SFJ ಎಚ್ಚರಿಕೆ

Update: 2024-11-05 22:35 IST

ಗುರುಪತ್ವಂತ್ ಸಿಂಗ್ ಪನ್ನೂನ್ | PC : PTi 

ಒಟ್ಟಾವ : ಕೆನಡಾದ ಬ್ರಾಂಪ್ಟನ್ ನಲ್ಲಿ ಹಿಂದು ಸಭಾ ದೇವಸ್ಥಾನದಲ್ಲಿ ಭಕ್ತರ ಮೇಲೆ ನಡೆದ ದಾಳಿಯ ಬಳಿಕ ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ಜೆ) ಸಂಘಟನೆ ನೇರ ಬೆದರಿಕೆ ಒಡ್ಡಿದ್ದು `ಕೆನಡಾದಲ್ಲಿ ಧಾರ್ಮಿಕ ಸಂಸ್ಥೆಗೆ ಭಾರತೀಯ ರಾಜತಾಂತ್ರಿಕರ ಭೇಟಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವರು ಖಾಲಿಸ್ತಾನ್ ಪರ ಸಿಖ್ಖರನ್ನು ಎದುರಿಸಬೇಕಾಗುತ್ತದೆ' ಎಂದು ಭಾರತ ಸರಕಾರವನ್ನು ಆಗ್ರಹಿಸಿದೆ.

ಕೆನಡಾದಲ್ಲಿರುವ ಧಾರ್ಮಿಕ ಸಂಸ್ಥೆಗಳಿಗೆ ಭಾರತೀಯ ರಾಜತಾಂತ್ರಿಕರು ಭೇಟಿ ನೀಡುವುದನ್ನು ಎಸ್ಎಫ್ಜೆ ವಿರೋಧಿಸುತ್ತದೆ ಎಂದು ಗುರುಪತ್ವಂತ್ ಸಿಂಗ್ ಪನ್ನೂನ್ ನೇತೃತ್ವದ ಖಾಲಿಸ್ತಾನ್ ಪರ ಸಂಘಟನೆಯ ವಕ್ತಾರರು ಮಂಗಳವಾರ ಹೇಳಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News