×
Ad

ಗ್ರೀಸ್ ನಲ್ಲಿ ಭೂಕಂಪ: ಶಾಲೆಗಳಿಗೆ ರಜೆ

Update: 2025-02-03 22:00 IST

ಸಾಂದರ್ಭಿಕ ಚಿತ್ರ

ಅಥೆನ್ಸ್ : ಗ್ರೀಸ್‍ನ ಜನಪ್ರಿಯ ಪ್ರವಾಸೀ ತಾಣ ಸ್ಯಾಂಟೋರಿನಿ ದ್ವೀಪದಲ್ಲಿ ಸತತ ನಾಲ್ಕನೇ ದಿನ ಭೂಕಂಪನದಿಂದ ನೆಲ ನಡುಗಿದ್ದು ಜನರು ಆತಂಕಗೊಂಡಿದ್ದಾರೆ. ಎಲ್ಲಾ ಶಾಲೆಗಳನ್ನೂ ಮುಚ್ಚಲಾಗಿದ್ದು ದ್ವೀಪದಿಂದ ಹೊರ ಹೋಗಲು ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೆಚ್ಚುವರಿ ವಿಮಾನಗಳನ್ನು ವ್ಯವಸ್ಥೆ ಮಾಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

ಶುಕ್ರವಾರದಿಂದ ಏಜಿಯನ್ ಸಮುದ್ರ ವ್ಯಾಪ್ತಿಯ ಸ್ಯಾಂಟೋರಿನಿ ಮತ್ತು ಅಮೋರ್ಗಸ್ ದ್ವೀಪಗಳ ನಡುವಿನ ಪ್ರದೇಶದಲ್ಲಿ 200ಕ್ಕೂ ಅಧಿಕ ಕಂಪನಗಳು ಸಂಭವಿಸಿವೆ. ಸ್ಯಾಂಟೋರಿನಿ ಹಾಗೂ ಲೋಸ್, ಅಮೋರ್ಗೊಸ್, ಅನಾಫಿ ದ್ವೀಪಗಳ ವ್ಯಾಪ್ತಿಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಸೋಮವಾರದಿಂದ ಕೆಲವು ನಿಮಿಷಕ್ಕೊಮ್ಮೆ 4 ತೀವ್ರತೆಯ ಕಂಪನ ಸಂಭವಿಸಿದ್ದರಿಂದ ಒಳಾಂಗಣ ಪ್ರದೇಶಗಳಿಂದ ದೂರ ಇರುವಂತೆ ಜನರಿಗೆ ಸಲಹೆ ನೀಡಿದ್ದು ಅಗತ್ಯ ಬಿದ್ದರೆ ಜನರ ಸ್ಥಳಾಂತರಕ್ಕೆ ಅನುಕೂಲವಾಗಲು ಶಿಬಿರಗಳನ್ನು ನಿರ್ಮಿಸಲಾಗಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News