×
Ad

ಮ್ಯಾನ್ಮಾರ್ ನ ಮ್ಯಾಂಡಲೆ ಬಳಿ ಮತ್ತೆ 5.1 ತೀವ್ರತೆಯ ಭೂಕಂಪ

Update: 2025-03-30 18:23 IST

Photo Credit: AP

ಬ್ಯಾಂಕಾಕ್: ಮ್ಯಾನ್ಮಾರ್ ನ ಎರಡನೆ ಅತಿ ದೊಡ್ಡ ನಗರವಾದ ಮ್ಯಾಂಡಲೆ ಬಳಿ ರವಿವಾರ ಮತ್ತೆ 5.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಶುಕ್ರವಾರ ಸಂಭವಿಸಿದ ಭಾರಿ ಭೂಕಂಪದ ನಂತರದ ಕಂಪನಗಳ ಸರಣಿಯಲ್ಲಿ ಇದು ಇತ್ತೀಚಿನದಾಗಿದೆ ಎಂದು ಅಮೆರಿಕ ಭೌಗೋಳಿಕ ಸಮೀಕ್ಷಾ ಸಂಸ್ಥೆ ಹೇಳಿದೆ.

ಈ ಭೂಕಂಪನದಿಂದ ಜನರು ಭೀತಿಯಿಂದ ಕಿರುಚಿಕೊಳ್ಳುತ್ತಾ ಮ್ಯಾಂಡಲೆಯ ರಸ್ತೆಗಳಿಗೆ ಧಾವಿಸಿದರು ಎಂದು ವರದಿಯಾಗಿದೆ.

ಇದಕ್ಕೂ ಮುನ್ನ, ಶುಕ್ರವಾರ ಮ್ಯಾಂಡಲೆಯಲ್ಲಿ ಸಂಭವಿಸಿದ 7.7 ತೀವ್ರತೆಯ ಭಾರಿ ಭೂಕಂಪದಿಂದ ಹಲವಾರು ಕಟ್ಟಡಗಳು ಧರೆಗುರುಳಿದ್ದವು ಹಾಗೂ ಇನ್ನಿತರ ಮೂಲಸೌಕರ್ಯಗಳು ಹಾನಿಗೊಳಗಾಗಿದ್ದವು.

ಇಲ್ಲಿಯವರೆಗೆ 1,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 3,400ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News