ಈಜಿಪ್ಟ್: ಮಾನವ ಹಕ್ಕುಗಳ ಕಾರ್ಯಕರ್ತ ಅಹ್ಮದ್ ದೌಮಾ ಅವರಿಗೆ ಕ್ಷಮಾದಾನ
Update: 2023-08-19 22:50 IST
Ahmed Doma | Photo: twitter \ @ibrahim3ezz
ಕೈರೊ: ಕಳೆದ 10 ವರ್ಷಗಳಿಂದ ಜೈಲಿನಲ್ಲಿದ್ದ ಪ್ರಮುಖ ಮಾನವ ಹಕ್ಕುಗಳ ಕಾರ್ಯಕರ್ತ ಅಹ್ಮದ್ ದೌಮಾ ಸೇರಿದಂತೆ ಹಲವು ಕೈದಿಗಳಿಗೆ ಈಜಿಪ್ಟ್ ಅಧ್ಯಕ್ಷರು ಕ್ಷಮಾದಾನ ನೀಡಿದ್ದಾರೆ ಎಂದು ಉನ್ನತ ಮೂಲಗಳು ಶನಿವಾರ ಮಾಹಿತಿ ನೀಡಿವೆ.
2011ರಲ್ಲಿ ಅಂದಿನ ಅಧ್ಯಕ್ಷ ಹೊಸ್ನಿ ಮುಬಾರಕ್ ರನ್ನು ಪದಚ್ಯುತಗೊಳಿಸಿದ ಪ್ರಜಾಪ್ರಭುತ್ವ ಪರ ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ 37 ವರ್ಷದ ದೌಮಾ, ಗಲಭೆ ಮತ್ತು ಭದ್ರತಾ ಪಡೆಗಳ ಮೇಲಿನ ದಾಳಿ ಪ್ರಕರಣದಲ್ಲಿ 2015ರಲ್ಲಿ 25 ವರ್ಷದ ಸೆರೆವಾಸ ವಿಧಿಸಲಾಗಿತ್ತು ಮತ್ತು 2019ರಲ್ಲಿ ಇದನ್ನು 15 ವರ್ಷಕ್ಕೆ ಇಳಿಸಲಾಗಿತ್ತು. ಇದೀಗ ಅಧ್ಯಕ್ಷ ಅಬ್ದುಲ್ ಪತಾಹ್ ಎಲ್ಸಿಸಿ ತಮ್ಮ ಸಾಂವಿಧಾನಿಕ ಅಧಿಕಾರ ಬಳಸಿ ಹಲವು ಕೈದಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.