×
Ad

ಮತದಾರರ ಪಟ್ಟಿಯಲ್ಲಿ ತಿದ್ದುಪಡಿಗೆ ಪಾಕ್ ಚುನಾವಣಾ ಆಯೋಗ ನಿಷೇಧ

Update: 2023-12-18 23:35 IST

File Photo

ಇಸ್ಲಮಾಬಾದ್: ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ನೋಂದಣಿ, ಹೆಸರು ರದ್ದುಗೊಳಿಸುವುದು, ಪರಿಷ್ಕರಣೆ ಮತ್ತು ತಿದ್ದುಪಡಿಯನ್ನು ಪಾಕಿಸ್ತಾನದ ಚುನಾವಣಾ ಆಯೋಗ ನಿಷೇಧಿಸಿರುವುದಾಗಿ ಎಆರ್‍ಐ ನ್ಯೂಸ್ ವರದಿ ಮಾಡಿದೆ.

ಜತೆಗೆ, ಪೊಲೀಸರು, ಚುನಾವಣಾ ಅಧಿಕಾರಿಗಳು ಹಾಗೂ ಇತರ ಸಿಬಂದಿಗಳು ರಜೆ ಹಾಕಬಾರದು. ಸರಕಾರಿ ಸಿಬಂದಿಗಳನ್ನು ವರ್ಗಾಯಿಸಬಾರದು ಎಂದು ಪ್ರಾಂತೀಯ ಮತ್ತು ಫೆಡರಲ್ ಸರಕಾರಗಳಿಗೆ ಸೂಚಿಸಿದೆ.

ಈ ಮಧ್ಯೆ, ಸುಪ್ರೀಂಕೋರ್ಟ್‍ನ ನಿರ್ದೇಶನದಂತೆ, ಫೆಬ್ರವರಿ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News