×
Ad

ಟ್ರಂಪ್ ಆಡಳಿತದಿಂದ ಹೊರನಡೆದ ಎಲಾನ್ ಮಸ್ಕ್

Update: 2025-05-29 07:30 IST

PC: x.com/Mofoman360

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಗ್ರ ಸಲಹೆಗಾರ ಹುದ್ದೆಯಿಂದ ನಿರ್ಗಮಿಸುತ್ತಿರುವುದಾಗಿ ಉದ್ಯಮಿ ಎನಾಲ್ ಮಸ್ಕ್ ಗುರುವಾರ ಪ್ರಕಟಿಸಿದ್ದಾರೆ. ಇದರೊಂದಿಗೆ ವಿಶೇಷ ಸರ್ಕಾರಿ ಉದ್ಯೋಗಿಯಾಗಿ ಅಮೆರಿಕದ ಫೆಡರಲ್ ಆಡಳಿತವನ್ನು ಸುವ್ಯವಸ್ಥೆಗೆ ತರುವ ಹೊಣೆಗಾರಿಕೆ ಅಂತ್ಯವಾದಂತಾಗಿದೆ.

"ವಿಶೇಷ ಸರ್ಕಾರಿ ಉದ್ಯೋಗಿಯಾಗಿ ನನ್ನ ನಿಗದಿತ ಅಧಿಕಾರಾವಧಿ ಮುಕ್ತಾಯವಾಗಿದ್ದು, ಅನಗತ್ಯ ವೆಚ್ಚವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಅವಕಾಶ ನೀಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತಿದ್ದೇನೆ. DOGE ಮಿಷನ್ ಕಾಲಕ್ರಮೇಣ ಬಲಗೊಳ್ಳುತ್ತದೆ. ಸರ್ಕಾರದಲ್ಲಿ ಇದೊಂದು ಜೀವನಶೈಲಿಯಾಗಲಿದೆ" ಎಂದು ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.

ಶ್ವೇತಭವನದ ಅಧಿಕಾರಿಯೊಬ್ಬರು ಮಸ್ಕ್ ನಿರ್ಗಮನವನ್ನು ದೃಢಪಡಿಸಿದ್ದಾರೆ. ಟ್ರಂಪ್ ಅವರ ಮಹತ್ವದ ಶಾಸನಾತ್ಮಕ ಪ್ರಸ್ತಾವಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ನಡುವೆಯೇ ಮಸ್ಕ್ ನಿರ್ಗಮಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ತೆರಿಗೆ ಮತ್ತು ಇಮಿಗ್ರೇಷನ್ ಕ್ಷೇತ್ರದ ಕ್ರಾಂತಿಕಾರಕ ಬದಲಾವಣೆಗಳನ್ನು ಅಧ್ಯಕ್ಷರು "ದೊಡ್ಡ ಸುಂದರ ಮಸೂದೆ" ಎಂದು ಬಣ್ಣಿಸಿದ್ದರು. ಆದರೆ ಸಿಬಿಎಸ್ ಜತೆ ಮಾತನಾಡಿದ ಮಸ್ಕ್ ಈ ಮಸೂದೆಯನ್ನು ಟೀಕಿಸಿದ್ದು, ಇದು ವ್ಯಾಪಕ ವೆಚ್ಚದಾಯಕ ಮಸೂದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News