×
Ad

ಗಾಝಾದಲ್ಲಿ ಇಡೀ ಕುಟುಂಬಗಳನ್ನು ಹತ್ಯೆಗೈಯ್ಯಲಾಗುತ್ತಿದೆ: ಇಸ್ರೇಲ್ ಬಾಂಬ್ ದಾಳಿಗೆ ಖ್ಯಾತ ಹಾಲಿವುಡ್ ನಟಿ ಆಕ್ರೋಶ

Update: 2023-11-02 23:52 IST

ಆ್ಯಂಜೆಲಿನಾ ಜೊಲಿ Photo: instagram/angelinajolie/

ಹಾಲಿವುಡ್: ಗಾಝಾದ ನಿವಾಸಿಗಳ ಮೇಲೆ ಇಸ್ರೇಲ್ ಉದ್ದೇಶಪೂರ್ವಕ ಬಾಂಬ್ ದಾಳಿ ನಡೆಸುತ್ತಿದೆ. ಗಾಝಾ ಯುದ್ಧಕ್ಕೆ ಇಸ್ರೇಲ್ ಕಾರಣ ಎಂದು ಖ್ಯಾತ ಹಾಲಿವುಡ್ ನಟಿ, ಸಾಮಾಜಿಕ ಕಾರ್ಯಕರ್ತೆ ಆ್ಯಂಜೆಲಿನಾ ಜೊಲಿ ಹೇಳಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ಅವರು, ಅದರೊಂದಿಗೆ ಜಬಾಲಿಯ ನಿರಾಶ್ರಿತರ ಶಿಬಿರದ ಮೇಲೆ ನಡೆದಿರುವ ವಿಧ್ವಂಸಕ ಬಾಂಬ್ ದಾಳಿಯ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ.

ತಮ್ಮ ಸಾಮಾಜಿಕ ಸೇವಾ ಕಾರ್ಯಗಳಿಂದ ಜನಪ್ರಿಯವಾಗಿರುವ ‘ಸಾಲ್ಟ್’ ಚಿತ್ರದ ನಟಿ ಆ್ಯಂಜೆಲಿನಾ ಜೊಲಿ, ಗಾಝಾದಲ್ಲಿ ಸಿಲುಕಿಕೊಂಡಿರುವ ದೊಡ್ಡ ಜನಸಂಖ್ಯೆಯ ಮೇಲೆ ನಡೆಯುತ್ತಿರುವ ಉದ್ದೇಶಪೂರ್ವಕ ಬಾಂಬ್ ದಾಳಿ ಎಂದು ಇಸ್ರೇಲ್ ನ ವೈಮಾನಿಕ ದಾಳಿಯನ್ನು ಖಂಡಿಸಿದ್ದಾರೆ.

ಮುಂದುವರಿದು, “ಗಾಝಾದಲ್ಲಿ ಸಿಲುಕಿಕೊಂಡು ಎಲ್ಲಿಯೂ ಹೋಗಲಾಗದ ಜನರ ಮೇಲೆ ನಡೆಯುತ್ತಿರುವ ಉದ್ದೇಶಪೂರ್ವಕ ಬಾಂಬ್ ದಾಳಿ ಇದು. ಕಳೆದ ಎರಡು ದಶಕಗಳಿಂದ ಗಾಝಾ ಬಯಲು ಬಂದೀಖಾನೆಯಾಗಿದ್ದು, ಅದು ತುಂಬಾ ವೇಗವಾಗಿ ದೊಡ್ದ ಸಮಾಧಿಯಾಗಿ ಬದಲಾಗುತ್ತಿದೆ. ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿರುವವರ ಪೈಕಿ ಶೇ. 40ರಷ್ಟು ಮಂದಿ ಮಕ್ಕಳಾಗಿದ್ದಾರೆ. ಇಡೀ ಕುಟುಂಬಗಳನ್ನು ಹತ್ಯೆಗೈಯ್ಯಲಾಗುತ್ತಿದೆ” ಎಂದು ಕಿಡಿ ಕಾರಿದ್ದಾರೆ. 

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News