×
Ad

ಬೇಹುಗಾರಿಕೆ ಆರೋಪ: ಅಮೆರಿಕದ ಪತ್ರಕರ್ತನ ಬಂಧನ ಅವಧಿ ವಿಸ್ತರಿಸಿದ ರಶ್ಯ ನ್ಯಾಯಾಲಯ

Update: 2023-11-28 23:04 IST

Photo: X/jaketapper

ಮಾಸ್ಕೊ: ಬೇಹುಗಾರಿಕೆ ಆರೋಪದಲ್ಲಿ ಈ ವರ್ಷದ ಮಾರ್ಚ್‍ನಲ್ಲಿ ಬಂಧಿಸಲಾಗಿದ್ದ ಅಮೆರಿಕದ ಪತ್ರಕರ್ತ ಇವಾನ್ ಗೆರ್ಷ್‍ಕೊವಿಚ್ ಬಂಧನದ ಅವಧಿಯನ್ನು ಜನವರಿಯವರೆಗೆ ವಿಸ್ತರಿಸಿ ರಶ್ಯದ ನ್ಯಾಯಾಲಯ ಆದೇಶ ಜಾರಿಗೊಳಿಸಿದೆ.

ಅಮೆರಿಕದ `ವಾಲ್‍ಸ್ಟ್ರೀಟ್ ಜರ್ನಲ್'ನ ಮಾಸ್ಕೊ ವರದಿಗಾರನಾಗಿದ್ದ 32 ವರ್ಷದ ಇವಾನ್ ಗೆರ್ಷ್‍ಕೊವಿಚ್ ಉಕ್ರೇನ್ ಮೇಲೆ ರಶ್ಯದ ಆಕ್ರಮಣ ಆರಂಭಗೊಂಡ ಬಳಿಕವೂ ರಶ್ಯದಲ್ಲೇ ಉಳಿದು ಕರ್ತವ್ಯ ನಿರ್ವಹಿಸುತ್ತಿದ್ದರು. ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಇವಾನ್‍ರನ್ನು ಬಂಧಿಸಿದ ಬಳಿಕ ಮುಚ್ಚಿದ ಕೋಣೆಯೊಳಗೆ ವಿಚಾರಣೆ ನಡೆಸಲಾಗುತ್ತಿತ್ತು.

ಆರೋಪವನ್ನು ವಾಲ್‍ಸ್ಟ್ರೀಟ್ ಜರ್ನಲ್ ಮತ್ತು ಅಮೆರಿಕ ಸರಕಾರ ನಿರಾಕರಿಸಿದೆ. ಮಾಸ್ಕೋದ ಕುಖ್ಯಾತ ಲೆಫೊರ್ಟೋವೊ ಜೈಲಿನಲ್ಲಿದ್ದ ಇವಾನ್‍ರ ಬಂಧನವನ್ನು ಜನವರಿ 30ರವರೆಗೆ ವಿಸ್ತರಿಸಿ ನ್ಯಾಯಾಲಯ ಆದೇಶ ಜಾರಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News