×
Ad

ಎರಡು ಪ್ರಕರಣಗಳಲ್ಲಿ ಇಮ್ರಾನ್ ಖುಲಾಸೆ

Update: 2024-03-19 23:42 IST

ಇಮ್ರಾನ್‍ಖಾನ್ | Photo: PTI

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ 2002ರ ಮಾರ್ಚ್‍ನಲ್ಲಿ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ನೇತೃತ್ವದಲ್ಲಿ ನಡೆದ ಸರಕಾರಿ ವಿರೋಧಿ ರ‍್ಯಾಲಿಗೆ ಸಂಬಂಧಿಸಿದ ಎರಡು ಪ್ರತ್ಯೇಕ ಗಲಭೆ ಪ್ರಕರಣದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಮ್ರಾನ್‍ಖಾನ್‍ರನ್ನು ಖುಲಾಸೆಗೊಳಿಸಿದೆ.

ಗಲಭೆಗೆ ಸಂಬಂಧಿಸಿ ಒಂದೇ ದಿನ ಇಮ್ರಾನ್ ವಿರುದ್ಧ ಹಲವು ಆರೋಪಪಟ್ಟಿ ದಾಖಲಿಸಲಾಗಿದ್ದು ಎಲ್ಲದರಲ್ಲೂ ಒಂದೇ ವಿಷಯವನ್ನು ಉಲ್ಲೇಖಿಸಲಾಗಿದೆ. ಇಮ್ರಾನ್ ಪಕ್ಷ ಆಯೋಜಿಸಿದ್ದ ರ‍್ಯಾಲಿಯ ಸಂದರ್ಭ ನಿಷೇಧಾಜ್ಞೆ ವಿಧಿಸಿರುವ ಬಗ್ಗೆ ಸರಕಾರ ಮುಂಚಿತವಾಗಿ ಅಧಿಸೂಚನೆ ಹೊರಡಿಸಿರಲಿಲ್ಲ. ಆದ್ದರಿಂದ ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಇಮ್ರಾನ್‍ಖಾನ್ ಅವರ ವಕೀಲರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇಸ್ಲಾಮಾಬಾದ್‍ನ ಲೋಹಿ ಭಯರ್ ಮತ್ತು ಸಹಾಲಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣದಿಂದ ಇಮ್ರಾನ್‍ಖಾನ್‍ರನ್ನು ಖುಲಾಸೆಗೊಳಿಸಿದೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News