×
Ad

ದಕ್ಷಿಣ ಆಫ್ರಿಕಾದಲ್ಲಿ ಭೀಕರ ಬಸ್ ಅಪಘಾತ: ಕನಿಷ್ಟ 45 ಮಂದಿ ಸಾವು

Update: 2024-03-29 22:21 IST

Photo: X \ @_ArriveAlive

ಜೊಹಾನ್ಸ್‍ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಪ್ರಯಾಣಿಕರ ಬಸ್ಸೊಂದು ಸೇತುವೆಯಿಂದ ಕಂದರಕ್ಕೆ ಉರುಳಿ ಕನಿಷ್ಟ 45 ಮಂದಿ ಸಾವನ್ನಪ್ಪಿರುವುದಾಗಿ ಸಾರಿಗೆ ಸಚಿವಾಲಯ ಮಾಹಿತಿ ನೀಡಿದೆ.

ಈಸ್ಟರ್ ಯಾತ್ರಿಕರಿದ್ದ ಬಸ್ಸು ದಕ್ಷಿಣ ಆಫ್ರಿಕಾದ ಬೋಟ್ಸ್ ವಾನಾದಿಂದ ಉತ್ತರದ ಲಿಂಪೊಪೊ ಪ್ರಾಂತದ ಮೊರಿಯಾ ನಗರದತ್ತ ಪ್ರಯಾಣಿಸುತ್ತಿದ್ದಾಗ ಮಮತ್ಲಾಕಲ ಸೇತುವೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಬ್ಯಾರಿಕೇಡ್‍ಗೆ ಢಿಕ್ಕಿ ಹೊಡೆದು ಪಕ್ಕದ ಕಂದರಕ್ಕೆ ಉರುಳಿದೆ. ಅಪಘಾತದ ತೀವ್ರತೆಗೆ ಬಸ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬಸ್ಸಿನಲ್ಲಿದ್ದ 45 ಮಂದಿ ಮೃತಪಟ್ಟಿದ್ದು ಓರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ದಕ್ಷಿಣ ಆಫ್ರಿಕಾದ ಸಾರಿಗೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ 8 ವರ್ಷದ ಬಾಲಕನೊಬ್ಬ ಹೆಚ್ಚಿನ ಗಾಯಗಳಿಲ್ಲದೆ ಪಾರಾಗಿದ್ದಾನೆ. ಬಹುತೇಕ ಮೃತದೇಹಗಳು ಗುರುತಿಸಲಾಗದ ಸ್ಥಿತಿಯಲ್ಲಿವೆ ಎಂದು ಪ್ರಾಂತೀಯ ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News