×
Ad

ಫೆಲೆಸ್ತೀನಿಯನ್ನರನ್ನು ಕರೆತಂದ ಮೊದಲ ವಿಮಾನ ಯುಎಇಗೆ ಆಗಮನ

Update: 2023-11-18 22:13 IST

Photo: @HSajwanization \ X

ಅಬುಧಾಬಿ: ಫೆಲೆಸ್ತೀನ್‍ನ 1000 ಮಕ್ಕಳಿಗೆ ಆಶ್ರಯ ಕಲ್ಪಿಸುವ ಯೋಜನೆಯ ಭಾಗವಾಗಿ ಗಾಝಾ ಪಟ್ಟಿಯಿಂದ ಮಕ್ಕಳು ಸೇರಿದಂತೆ 15 ಜನರನ್ನು ಕರೆತಂದ ಮೊದಲ ವಿಮಾನ ಶನಿವಾರ ಯುಎಇಗೆ ಆಗಮಿಸಿದೆ ಎಂದು ವರದಿಯಾಗಿದೆ.

ಇಂಧನ ಸೇರಿಂದಂತೆ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿರುವ ಗಾಝಾದ ಆಸ್ಪತ್ರೆಗಳಲ್ಲಿರುವ 1000 ಮಕ್ಕಳು ಹಾಗೂ ಅವರ ಕುಟುಂಬದವರಿಗೆ ಯುಎಇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸುವುದಾಗಿ ಕಳೆದ ವಾರ ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್‍ನಹ್ಯಾನ್ ಘೋಷಿಸಿದ್ದರು.

ಈಜಿಪ್ಟ್ನ ಎಲ್ ಆರಿಷ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಅಬುಧಾಬಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದ್ದು ಗಂಭೀರ ಗಾಯಗೊಂಡವರು, ಕ್ಯಾನ್ಸರ್ ರೋಗಿಗಳ ಸಹಿತ ತುರ್ತು ಚಿಕಿತ್ಸೆಯ ಅಗತ್ಯವಿದ್ದವರನ್ನು ಮೊದಲ ವಿಮಾನದಲ್ಲಿ ಕರೆತರಲಾಗಿದೆ. ಉಳಿದ ಮಕ್ಕಳು ಹಾಗೂ ಅವರ ಕುಟುಂಬದವರನ್ನು ಸ್ವೀಕರಿಸಲು, ಅವರಿಗೆ ಸಮಗ್ರ ಆರೈಕೆ ಮತ್ತು ವಿಶೇಷ ಸೇವೆಗಳನ್ನು ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಒದಗಿಸಲು ಯುಎಇ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಿಬಂದಿ ಸಿದ್ಧವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News