×
Ad

ಅಮೆರಿಕ: ಪ್ರವಾಸಿಗರಿದ್ದ ಬಸ್ ಅಪಘಾತ; ಭಾರತೀಯರು ಸೇರಿ ಐವರು ಮೃತ್ಯು

Update: 2025-08-23 08:16 IST

PC: x.com/CNN

ನ್ಯೂಯಾರ್ಕ್: ಬಹುತೇಕ ಭಾರತೀಯರು, ಚೀನೀಯರು ಮತ್ತು ಫಿಲಿಫೀನ್ಸ್ ಪ್ರಜೆಗಳು ಸೇರಿ ಸುಮಾರು 50 ಮಂದಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸು ಶುಕ್ರವಾರ ನ್ಯೂಯಾರ್ಕ್ ಬಳಿ ಅಪಘಾತಕ್ಕೀಡಾಗಿ ಐದು ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಯಾಗರ ಫಾಲ್ಸ್ನಿಂದ ಬಸ್ಸು ನ್ಯೂಯಾರ್ಕ್ ನಗರಕ್ಕೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಬಫೆಲೋದ ಪೂರ್ವಕ್ಕಿರುವ ಪೆಮ್ಬ್ರೋಕ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿತ್ತು ಎಂದು ನ್ಯೂಯಾರ್ಕ್ ರಾಜ್ಯ ಪೊಲೀಸ್ ವಕ್ತಾರ ಜೇಮ್ಸ್ ಒ ಕಲಗಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಮೃತಪಟ್ಟವರಲ್ಲಿ ಮಗುವೂ ಸೇರಿರುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದ್ದಾರೆ. ಹಲವು ಮಂದಿ ಬಸ್ಸಿನಿಂದ ಎಸೆಯಲ್ಪಟ್ಟಿದ್ದಾರೆ, ಇತರ ಹಲವು ಮಂದಿ ಒಳಗೆ ಸಿಕ್ಕಿಹಾಕಿಕೊಂಡಿದ್ದಾರೆ. ಸಿಕ್ಕಿಹಾಕಿಕೊಂಡಿರುವವರಲ್ಲಿ ಕೆಲವರು ಬದುಕಿ ಉಳಿದಿದ್ದಾರೆ ಎಂದು ವಿವರಿಸಿದ್ದಾರೆ.

ಚಾಲಕ ಸೇರಿದಂತೆ ಬಸ್ಸಿನಲ್ಲಿ 54 ಮಂದಿ ಪ್ರಯಾಣಿಕರಿದ್ದರು ಎಂದು ಬಸ್ ಆಪರೇಟರ್ ತಿಳಿಸಿದ್ದಾರೆ. ಗಾಯಗೊಂಡವರು ಭಾರತ, ಚೀನಾ, ಫಿಲಿಫೀನ್ಸ್ ಹಿನ್ನೆಲೆಯ ಇಂಗ್ಲಿಷ್ ಹೊರತಾದ ಭಾಷೆಗಳನ್ನು ಆಡುವವರಾಗಿದ್ದರಿಂದ ಮಾಹಿತಿ ಸಂಗ್ರಹಕ್ಕೆ ಭಾಷಾಂತರಕಾರರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News