ಜೆರುಸಲೇಂನಲ್ಲಿ ಬಂದೂಕುಧಾರಿಗಳಿಂದ ಗುಂಡಿನ ದಾಳಿ : ಕನಿಷ್ಠ ಐವರು ಮೃತ್ಯು, ಹಲವರಿಗೆ ಗಾಯ
Update: 2025-09-08 15:55 IST
Photo credit: X/@SharrenHaskel
ಜೆರುಸಲೇಂ: ಉತ್ತರ ಜೆರುಸಲೇಂನ ಜನನಿಬಿಡ ಪ್ರದೇಶದಲ್ಲಿ ಬಸ್ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜೆರುಸಲೇಂನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ನ ಆರ್ಮಿ ರೇಡಿಯೋ ವರದಿ ಮಾಡಿದೆ.
ಇಸ್ರೇಲ್ ಮಾಧ್ಯಮಗಳ ವರದಿಯ ಪ್ರಕಾರ, ಇಬ್ಬರು ದಾಳಿಕೋರರು ಬಸ್ ಹತ್ತಿ ಗುಂಡಿನ ದಾಳಿ ನಡೆಸಿದ್ದಾರೆ.
"ಜೆರುಸಲೇಂನ ರಾಮೋಟ್ ಜಂಕ್ಷನ್‌ನಲ್ಲಿ ಗುಂಡಿನ ದಾಳಿ ನಡೆದ ಸ್ಥಳಕ್ಕೆ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ ಗ್ವಿರ್ ಆಗಮಿಸಿದ್ದಾರೆ. ಅವರು ಉಪ ಪೊಲೀಸ್ ಆಯುಕ್ತ ಅವ್ಶಾಲೋಮ್ ಪೆಲೆಡ್ ಮತ್ತು ಜೆರುಸಲೇಂ ಜಿಲ್ಲಾ ಕಮಾಂಡರ್ ಅಮೀರ್ ಅರ್ಜಾನಿ ಅವರೊಂದಿಗೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ" ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.