×
Ad

ಫಾಕ್ಸ್ ನ್ಯೂಸ್ ಮುಖ್ಯಸ್ಥ ರೂಪರ್ಟ್ ಮರ್ಡೋಕ್ ರಾಜೀನಾಮೆ

Update: 2023-09-21 22:48 IST

Murdoch | Photo: X \ @TheOnlyEsta

ವಾಷಿಂಗ್ಟನ್: ಫಾಕ್ಸ್ ನ್ಯೂಸ್ ಸಂಸ್ಥೆಯ ಸ್ಥಾಪಕ ರೂಪರ್ಟ್ ಮರ್ಡೋಕ್ ಫಾಕ್ಸ್‍ನ ಮಾತೃಸಂಸ್ಥೆ ಹಾಗೂ ನ್ಯೂಸ್ ಕಾರ್ಪೊರೇಷನ್‍ನ ಮುಖ್ಯಸ್ಥರ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

92 ವರ್ಷದ ಮರ್ಡೋಕ್ `ವಾಲ್‍ಸ್ಟ್ರೀಟ್ ಜರ್ನಲ್' ಮತ್ತು `ದಿ ನ್ಯೂಯಾರ್ಕ್ ಪೋಸ್ಟ್'ನ ಮಾಲಕರೂ ಆಗಿದ್ದಾರೆ. ಇನ್ನು ಮುಂದೆ ಅವರು ಸಂಸ್ಥೆಯಲ್ಲಿ ಗೌರವಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅವರ ಪುತ್ರ ಲಾಚ್ಲನ್ ಮರ್ಡೋಕ್ ಫಾಕ್ಸ್ ಕಾರ್ಪ್‍ನ ಸಿಇಒ ಹಾಗೂ ನ್ಯೂಸ್ ಕಾರ್ಪ್‍ನ ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ರೂಪರ್ಟ್ ಮರ್ಡೋಕ್ ಫಾಕ್ಸ್ ನ್ಯೂಸ್‍ನ ಜತೆಗೆ ಫಾಕ್ಸ್ ಬ್ರಾಡ್‍ಕಾಸ್ಟ್ ನೆಟ್‍ವರ್ಕ್ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News