ಫ್ರಾನ್ಸ್: ರಶ್ಯದ ರಾಯಭಾರಿ ಕಚೇರಿಯಲ್ಲಿ ಸ್ಫೋಟ
Update: 2025-02-24 22:47 IST
ಸಾಂದರ್ಭಿಕ ಚಿತ್ರ
ಪ್ಯಾರಿಸ್: ಫ್ರಾನ್ಸ್ನ ಮಾರ್ಸೆಲ್ಲೆಯಲ್ಲಿ ರಶ್ಯದ ರಾಯಭಾರಿ ಕಚೇರಿಯಲ್ಲಿ ಸೋಮವಾರ ಸ್ಫೋಟ ಸಂಭವಿಸಿದ್ದು ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಶ್ಯ-ಉಕ್ರೇನ್ ಯುದ್ಧದ ಮೂರನೇ ವಾರ್ಷಿಕ ದಿನದ ಸಂದರ್ಭದಲ್ಲೇ ಈ ಸ್ಫೋಟ ನಡೆದಿದೆ. ಗುರುತಿಸಲಾಗದ ಇಬ್ಬರು ದುಷ್ಕರ್ಮಿಗಳು ಬಾಟಲಿ ಬಾಂಬ್ಗಳನ್ನು ರಶ್ಯದ ಕಾನ್ಸುಲೇಟ್ ಕಚೇರಿಯೊಳಗೆ ಎಸೆದಿದ್ದು ಅದು ಸ್ಫೋಟಗೊಂಡಿದೆ. ಕಾನ್ಸುಲರ್ ಕಚೇರಿ ಬಳಿ ಕದ್ದು ತಂದಿದ್ದ ಕಾರೊಂದು ಪತ್ತೆಯಾಗಿದೆ ಎಂದು ಮಾರ್ಸೆಲ್ನಲ್ಲಿ ರಶ್ಯದ ಕಾನ್ಸುಲ್ ಜನರಲ್ ಸ್ಟನಿಸ್ಲಾವ್ ಒರಾಂಸ್ಕಿಯನ್ನು ಉಲ್ಲೇಖಿಸಿ `ಸ್ಪುಟ್ನಿಕ್' ವರದಿ ಮಾಡಿದೆ.
ದಾಳಿಯನ್ನು ಖಂಡಿಸಿರುವ ರಶ್ಯ, ಇದು ಸಶಸ್ತ್ರ ಹೋರಾಟಗಾರರ ಕೃತ್ಯದಂತೆ ಕಾಣುತ್ತಿದ್ದು ವಿಸ್ತೃತತ ತನಿಖೆ ನಡೆಸಬೇಕು ಎಂದು ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವಾ ವು ಫ್ರಾನ್ಸ್ ಸರಕಾರವನ್ನು ಆಗ್ರಹಿಸಿದ್ದಾರೆ.