×
Ad

ಫ್ರಾನ್ಸ್ | ಸಂಗೀತ ಉತ್ಸವದಲ್ಲಿ ಜನರ ಮೇಲೆ ನಿಗೂಢ ಸಿರಿಂಜ್ ದಾಳಿ!

Update: 2025-06-25 15:39 IST

PC : X \ @DomFreePress

ಪ್ಯಾರಿಸ್ : ಫ್ರಾನ್ಸ್‌ನಲ್ಲಿ ಬೀದಿ ಸಂಗೀತ ಉತ್ಸವದ ಸಂದರ್ಭದಲ್ಲಿ 145 ಜನರಿಗೆ ಸಿರಿಂಜ್‌ನಿಂದ ಚುಚ್ಚಲಾಗಿದೆ ಎಂದು ಫ್ರಾನ್ಸ್‌ನ ಆಂತರಿಕ ಸಚಿವಾಲಯ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 12 ಜನರನ್ನು ಬಂಧಿಸಿದ್ದಾರೆ.

ಫ್ರಾನ್ಸ್‌ನಾದ್ಯಂತ ದಾಳಿಗಳು ನಡೆದಿವೆ. ಪ್ಯಾರಿಸ್ ಪೊಲೀಸರು ರಾಜಧಾನಿಯಲ್ಲಿ ಕನಿಷ್ಠ 13 ಪ್ರಕರಣಗಳು ನಡೆದಿರುವುದನ್ನು ದೃಢಪಡಿಸಿದ್ದಾರೆ. ಸಚಿವಾಲಯ ಇದನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ. ವಿಷಕಾರಿ ಅಂಶಗಳನ್ನು ಚುಚ್ಚಿರುವ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಸಂತ್ರಸ್ತರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದಾರೆ. ಫ್ರಾನ್ಸ್‌ನ ವಾರ್ಷಿಕ ಸಂಗೀತ ಉತ್ಸವ ʼಫೆಟೆ ಡೆ ಲಾ ಮ್ಯೂಸಿಕ್ʼ(Fête de la Musique) ಸಮಯದಲ್ಲಿ ಘಟನೆ ನಡೆದಿದೆ.

ಜನರ ಗುಂಪಿನಲ್ಲಿದ್ದ 145 ಮಂದಿಗೆ ಸಿರಿಂಜ್ ಮೂಲಕ ಚುಚ್ಚಲಾಗಿದೆ. ದಾಳಿ ಕೋರನ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಎನ್ನಲಾಗಿದೆ.

ಸಿರಿಂಜ್ ದಾಳಿಗೆ ಒಳಗಾದವರಲ್ಲಿ ತಲೆತಿರುಗುವಿಕೆ, ಪ್ರಜ್ಞೆ ಕಳೆದುಕೊಳ್ಳುವುದು ಮತ್ತು ಚರ್ಮದ ಮೇಲೆ ಕಲೆಗಳು ಸೇರಿದಂತೆ ಹಲವು ಲಕ್ಷಣಗಳು ಗೋಚರಿಸಿದೆ. ಕೆಲವರು ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಅವರ ಮೂತ್ರ ಮತ್ತು ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News