×
Ad

ಉಕ್ರೇನ್ಗೆ ಪ್ರಥಮ ಮಿರಾಜ್ ಯುದ್ಧವಿಮಾನ ಪೂರೈಸಿದ ಫ್ರಾನ್ಸ್

Update: 2025-02-06 20:19 IST

ಪ್ಯಾರಿಸ್: ರಶ್ಯದ ವೈಮಾನಿಕ ದಾಳಿಯ ವಿರುದ್ಧ ತನ್ನ ವಾಯುಪ್ರದೇಶವನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡಲು ಉಕ್ರೇನ್ಗೆ ಮಿರಾಜ್ 2000-5 ಯುದ್ಧವಿಮಾನಗಳ ಪ್ರಥಮ ಕಂತನ್ನು ಒದಗಿಸಲಾಗಿದೆ ಎಂದು ಫ್ರಾನ್ಸ್ನ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೋರ್ನು ಗುರುವಾರ ಹೇಳಿದ್ದಾರೆ.

ಮಿರಾಜ್ ಯುದ್ಧವಿಮಾನಗಳ ಹಾರಾಟ ಮತ್ತು ನಿರ್ವಹಣೆ ನಡೆಸಲು ಉಕ್ರೇನ್ ನ ಪೈಲಟ್ಗಳಿಗೆ ಪ್ಯಾರಿಸ್ನಲ್ಲಿ ತರಬೇತಿ ನೀಡಲಾಗಿದೆ. ಇದೀಗ ಮಿರಾಜ್ ಯುದ್ಧವಿಮಾನಗಳು ಉಕ್ರೇನ್ ಆಗಸದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಲೆಕೋರ್ನು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉಕ್ರೇನ್ ಜತೆಗಿನ ಮಿಲಿಟರಿ ಸಹಕಾರದ ಭಾಗವಾಗಿ ಉಕ್ರೇನ್ಗೆ ಮಿರಾಜ್ 2000-5 ಯುದ್ಧವಿಮಾನಗಳನ್ನು ಪೂರೈಸಲಾಗುವುದು ಮತ್ತು ಇವುಗಳ ನಿರ್ವಹಣೆಗೆ ಉಕ್ರೇನ್ ನ ಪೈಲಟ್ಗಳಿಗೆ ತರಬೇತಿ ಒದಗಿಸಲಾಗುವುದು ಎಂದು ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರೋನ್ ಕಳೆದ ಜೂನ್ ನಲ್ಲಿ ಘೋಷಿಸಿದ್ದರು. ಫ್ರಾನ್ಸ್ನ ವಾಯುಪಡೆಯ ಬಳಿ ಇರುವ 26 ಮಿರಾಜ್ ಯುದ್ಧವಿಮಾನಗಳಲ್ಲಿ 6 ವಿಮಾನಗಳನ್ನು ಉಕ್ರೇನ್ ಗೆ ವರ್ಗಾಯಿಸಲಾಗುವುದು ಎಂದು ಫ್ರಾನ್ಸ್ನ ರಕ್ಷಣಾ ಸಚಿವಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News