×
Ad

ಉಕ್ರೇನ್‍ಗೆ ಗುಪ್ತಚರ ನೆರವು ಒದಗಿಸಲು ಸಿದ್ಧ: ಫ್ರಾನ್ಸ್

Update: 2025-03-06 21:15 IST

ಪ್ಯಾರಿಸ್: ಯುದ್ಧಕ್ಕೆ ಸಂಬಂಧಿಸಿ ಉಕ್ರೇನ್‍ಗೆ ಗುಪ್ತಚರ ಮಾಹಿತಿ ಹಂಚಿಕೆಯನ್ನು ಅಮೆರಿಕ ಸ್ಥಗಿತಗೊಳಿಸಿದ ಬೆನ್ನಲ್ಲೇ ಉಕ್ರೇನ್‍ಗೆ ಗುಪ್ತಚರ ನೆರವು ಒದಗಿಸಲು ಫ್ರಾನ್ಸ್ ಸಿದ್ಧವಿದೆ ಎಂದು ಫ್ರಾನ್ಸ್‍ನ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೋರ್ನು ಗುರುವಾರ ಹೇಳಿದ್ದಾರೆ.

ರಶ್ಯದ ಜತೆ ಶಾಂತಿ ಮಾತುಕತೆಗೆ ಸಹಕರಿಸಲು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಮೇಲೆ ಒತ್ತಡ ಮುಂದುವರಿಸಿರುವ ಅಮೆರಿಕ, ಉಕ್ರೇನ್‍ಗೆ ಗುಪ್ತಚರ ನೆರವು ಸ್ಥಗಿತಗೊಳಿಸುವುದಾಗಿ ಬುಧವಾರ ಘೋಷಿಸಿತ್ತು. `ನಮ್ಮ ಬಳಿ ಗುಪ್ತಚರ ಸಂಪನ್ಮೂಲಗಳಿದ್ದು ಇದನ್ನು ಉಕ್ರೇನ್‍ಗೆ ನೆರವಾಗಲು ಬಳಸಬಹುದು ಎಂದು ಲೆಕೋರ್ನು ಹೇಳಿದ್ದಾರೆ.

ಯುರೋಪ್‍ಗೆ ರಶ್ಯದಿಂದ ಎದುರಾಗಿರುವ ಬೆದರಿಕೆಯ ಹಿನ್ನೆಲೆಯಲ್ಲಿ ತನ್ನ ಪರಮಾಣು ಶಸ್ತ್ರಗಳು ನೀಡುವ ರಕ್ಷಣೆಯನ್ನು ಯುರೋಪಿಯನ್ ಪಾಲುದಾರರಿಗೆ ವಿಸ್ತರಿಸಲು ಫ್ರಾನ್ಸ್ ಮುಕ್ತವಾಗಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News