×
Ad

ಇಸ್ರೇಲಿ ಸರಕಾರವನ್ನು ಟೀಕಿಸಿದ್ದಕ್ಕೆ ಫ್ರೆಂಚ್ ರಬ್ಬಿಗೆ ಜೀವ ಬೆದರಿಕೆ: ವರದಿ

Update: 2025-05-18 18:10 IST

ರಬ್ಬಿ ಡೆಲ್ಫಿನ್ ಹಾರ್ವಿಲೂರ್ - Photo Credit - mizanonline

ಹೊಸದಿಲ್ಲಿ: ಪ್ಯಾರಿಸ್ ಮೂಲದ, ರಿಫಾರ್ಮ್ ಕಾಂಗ್ರಿಗೇಷನ್ ಅನ್ನು ಮುನ್ನಡೆಸುತ್ತಿರುವ ರಬ್ಬಿ ಡೆಲ್ಫಿನ್ ಹಾರ್ವಿಲೂರ್ ಅವರಿಗೆ ಗಾಝಾದಲ್ಲಿ ಮಾನವೀಯ ನಿರ್ಬಂಧವನ್ನು ಸಮರ್ಥಿಸಿಕೊಳ್ಳುತ್ತಿರುವ ತೀವ್ರ ಬಲಪಂಥೀಯ ಇಸ್ರೇಲಿ ಸರಕಾರವನ್ನು ಟೀಕಿಸಿದ್ದಕ್ಕಾಗಿ ಜೀವ ಬೆದರಿಕೆಗಳು ಬಂದಿವೆ ಎಂದು ಇಸ್ರೇಲಿ ದೈನಿಕ ಹಾರೆಟ್ಝ್ ವರದಿ ಮಾಡಿದೆ.

ಕಳೆದ ವಾರ ತ್ರೈಮಾಸಿಕ ನಿಯತಕಾಲಿಕ ಟೆನೌವಾದಲ್ಲಿ ಪ್ರಕಟಿತ ಲೆಖನವೊಂದರಲ್ಲಿ ಹಾರ್ವಿಲೂರ್,‘ಫೆಲೆಸ್ತೀನಿ ಜನರಿಗೆ ಭವಿಷ್ಯವಿಲ್ಲದಿದ್ದರೆ ಇಸ್ರೇಲಿ ಜನರಿಗೂ ಭವಿಷ್ಯವಿರುವುದಿಲ್ಲ’ ಎಂದು ಬರೆದಿದ್ದರು.

ಲೇಖನವು ಪ್ರಕಟಗೊಂಡ ಬಳಿಕ ಹಾರ್ವಿಲೂರ್ ಆನ್ಲೈನ್ನಲ್ಲಿ ನಿಂದನೆಯ ಸರಿಮಳೆಯನ್ನೇ ಎದುರಿಸಿದ್ದಾರೆ,ಇವುಗಳಲ್ಲಿ ಅವರನ್ನು ಕೊಲ್ಲುವ ಬೆದರಿಕೆಗಳೂ ಸೇರಿವೆ ಎಂದು ಹಾರೆಟ್ಝ್ ವರದಿ ಮಾಡಿದೆ.

‘ನನ್ನ ವಿರುದ್ಧ ದೂರುಗಳಿವೆ ಮತ್ತು ನಾನು ಸ್ವೀಕರಿಸಿರುವ ಶೇ.90ರಷ್ಟು ಸಂದೇಶಗಳು ಸ್ತ್ರೀ ದ್ವೇಷದಿಂದ ಕೂಡಿವೆ. ಅವರು ನನ್ನ ನೋಟವನ್ನು ಟೀಕಿಸುತ್ತಿದ್ದಾರೆ. ಮಹಿಳೆ ಮಾತನಾಡಬಾರದು, ಮಹಿಳೆ ಧಾರ್ಮಿಕ ಅಧಿಕಾರದ ಸ್ಥಾನದಲ್ಲಿರಬಾರದು ಎಂದು ಒತ್ತಾಯಿಸುತ್ತಿದ್ದಾರೆ’ ಎಂದು ಹಾರ್ವಿಲೂರ್ರನ್ನು ಉಲ್ಲೇಖಿಸಿ ಹಾರೆಟ್ಜ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News