ಮಾರ್ಚ್ 1ರಂದು ನವಾಲ್ನಿಯ ಅಂತ್ಯಸಂಸ್ಕಾರ : ವರದಿ
Update: 2024-02-28 22:43 IST
ನವಾಲ್ನಿ | Photo: hindustantimes.com
ಮಾಸ್ಕೋ: ಫೆಬ್ರವರಿ 16ರಂದು ಆಕ್ರ್ಟಿಕ್ ಜೈಲಿನಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದ ರಶ್ಯದ ವಿಪಕ್ಷ ಮುಖಂಡ ಅಲೆಕ್ಸಿ ನವಾಲ್ನಿಯ ಅಂತ್ಯಸಂಸ್ಕಾರ ಮಾರ್ಚ್ 1ರಂದು ಮಾಸ್ಕೋದಲ್ಲಿ ನಡೆಯಲಿದೆ ಎಂದು ಅವರ ವಕ್ತಾರೆ ಕಿರಾ ಯರ್ಮಿಶ್ ಹೇಳಿದ್ದಾರೆ.
ಆಗ್ನೇಯ ರಶ್ಯದ ಮರಿನೊ ಜಿಲ್ಲೆಯ `ಐಕಾನ್ ಆಫ್ ದಿ ಮದರ್ ಆಫ್ ಗಾಡ್' ಚರ್ಚ್‍ನ ಬಳಿಯ ಸಮಾಧಿ ಭೂಮಿಯಲ್ಲಿ ಮಾರ್ಚ್ 1ರಂದು ಅಪರಾಹ್ನ ಅಂತ್ಯಸಂಸ್ಕಾರ ನಡೆಯಲಿದೆ. ಅದಕ್ಕೂ ಮುನ್ನ ನಡೆಯಲಿರುವ ಶ್ರದ್ಧಾಂಜಲಿ ಸಭೆಯಲ್ಲಿ ನವಾಲ್ನಿಯ ಬೆಂಬಲಿಗರು, ಮಿತ್ರರು ಪಾಲ್ಗೊಳ್ಳಬೇಕು ಎಂದವರು ಹೇಳಿದ್ದಾರೆ.
47 ವರ್ಷದ ನವಾಲ್ನಿ ಜೈಲಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ. ನವಾಲ್ನಿ ಸಾವಿಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೊಣೆ ಎಂದು ಪಾಶ್ಚಿಮಾತ್ಯ ಮುಖಂಡರು ಆರೋಪಿಸಿದ್ದಾರೆ.