×
Ad

ಯುದ್ಧದ ಕುರಿತ ಜಿ20 ಜಂಟಿ ಘೋಷಣೆ ಹೆಮ್ಮೆ ಪಡುವಂತಿಲ್ಲ: ಉಕ್ರೇನ್

Update: 2023-09-09 22:41 IST

Photo- PTI

ಕೀವ್: ಭಾರತದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಉಕ್ರೇನ್ ಮೇಲಿನ ರಶ್ಯದ ಆಕ್ರಮಣದ ಕುರಿತು ಹೊರಡಿಸಲಾದ ಜಂಟಿ ಘೋಷಣೆಯಲ್ಲಿ ಹೆಮ್ಮೆ ಪಡುವಂತದ್ದು ಏನೂ ಇಲ್ಲ ಎಂದು ಉಕ್ರೇನ್‍ನ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ.

ಹೇಳಿಕೆಯಲ್ಲಿ ರಶ್ಯದ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ ಎಂಬುದನ್ನು ಗಮನಿಸಬೇಕು. ಶೃಂಗಸಭೆಯಲ್ಲಿ ಉಕ್ರೇನ್ ನಿಯೋಗವು ಪಾಲ್ಗೊಂಡಿದ್ದರೆ ಶೃಂಗಸಭೆಯಲ್ಲಿ ಭಾಗವಹಿಸುವವರು ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವಕಾಶ ಮಾಡುತ್ತಿದ್ದರು ಎಂದು ಉಕ್ರೇನ್‍ನ ವಿದೇಶಾಂಗ ಇಲಾಖೆಯ ವಕ್ತಾರ ಒಲೆಗ್ ನಿಕೊಲೆಂಕೊ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News