×
Ad

ಟೋಕಿಯೋದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ

Update: 2024-07-28 22:40 IST

ಎಸ್.ಜೈಶಂಕರ್ | PC : PTI 

ಟೋಕಿಯೋ : ಯುದ್ಧಭೂಮಿಯಿಂದ ಪರಿಹಾರ ಬರುವುದಿಲ್ಲ ಮತ್ತು ಯಾವುದೇ ಯುಗವು ಯುದ್ಧದ ಯುಗವಾಗಬಾರದು ಎಂಬ ಮಹಾತ್ಮಾ ಗಾಂಧೀಜಿಯವರ ಸಮಯಾತೀತ ಸಂದೇಶವು ಸಾರ್ವಕಾಲಿಕ ಸತ್ಯವಾಗಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ರವಿವಾರ ಹೇಳಿದ್ದಾರೆ.

ಜಪಾನ್ ರಾಜಧಾನಿ ಟೋಕಿಯೋದ ಎಡೊಗವ ನಗರದ ಫ್ರೀಡಮ್ ಪ್ಲಾಝಾದಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು ` ಗಾಂಧೀಜಿಯವರು ನಿಸರ್ಗದೊಂದಿಗೆ ಹೇಗೆ ಸೌಹಾರ್ದಯುತವಾಗಿ ಬಾಳಬೇಕೆಂಬುದರ ಶ್ರೇಷ್ಟ ಪ್ರತಿಪಾದಕರು. ಗಾಂಧೀಜಿ ಸುಸ್ಥಿರ ಬೆಳವಣಿಗೆಯ ಮೂಲ ಪ್ರವಾದಿ' ಎಂದರು. ಜಪಾನ್ಗೆ ಭಾರತದ ರಾಯಭಾರಿ ಸಿಬಿ ಜಾರ್ಜ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News