×
Ad

ಗಾಝಾ ಸಾಕ್ಷ್ಯಚಿತ್ರ ಪ್ರಸಾರ ನಿರಾಕರಿಸಿದ ಬಿಬಿಸಿ ನಾಚಿಕೆಯಿಂದ ತಲೆ ತಗ್ಗಿಸಬೇಕು: ಮಾಜಿ ನಿರೂಪಕ ಗ್ಯಾರಿ ಲೈನ್ಕರ್ ಆಕ್ರೋಶ

Update: 2025-07-05 15:12 IST

ಗ್ಯಾರಿ ಲೈನ್ಕರ್ (Photo credit: BBC)

ಲಂಡನ್: ಗಾಝಾದ ವೈದ್ಯರ ದುಃಸ್ಥಿತಿಯನ್ನೊಳಗೊಂಡ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಲು ವಿಫಲವಾದ ಬಿಬಿಸಿ ವಿರುದ್ಧ ಮಾಜಿ ನಿರೂಪಕ ಗ್ಯಾರಿ ಲೈನ್ಕರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಬಿಸಿ ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಲೈನ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ರಾತ್ರಿ ಲಂಡನ್‌ನಲ್ಲಿ ನಡೆದ ಗಾಝಾದ ವೈದ್ಯರ ದುಸ್ಥಿತಿಯ ಕುರಿತ ಸಾಕ್ಷ್ಯಚಿತ್ರದ ಖಾಸಗಿ ಪ್ರದರ್ಶನದ ನಂತರ ಲೈನ್ಕರ್ ಅವರು ನಿರ್ಮಾಪಕರೊಂದಿಗೆ ಮಾತನಾಡುತ್ತಿದ್ದರು.

"ಈ ಸಾಕ್ಷ್ಯಚಿತ್ರವನ್ನು ಎಲ್ಲರೂ ನೋಡಬೇಕಾಗಿತ್ತು. ಇವತ್ತು ನಾವೆಲ್ಲಾ ಗಾಝಾದ ಭಯಾನಕ ದೃಶ್ಯಗಳನ್ನು ನಾವು ನಮ್ಮ ಫೋನ್ ಗಳಲ್ಲಿ ನೋಡುತ್ತಿದ್ದೇವೆ. ಆದರೆ ಬಿಬಿಸಿಯು ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡುವ ಧೈರ್ಯ ತೋರಿಸಿಲ್ಲ. ಅವರು ಮೇಲ್ಮಟ್ಟದಿಂದ ಬರುವ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ" ಎಂದು ಗ್ಯಾರಿ ಲೈನ್ಕರ್ ಹೇಳಿದರು.

"30 ವರ್ಷಗಳ ಕಾಲ ಬಿಬಿಸಿಯಲ್ಲಿ ಕೆಲಸ ಮಾಡಿದ್ದ ನನಗೆ ಇತ್ತೀಚಿನ ಎರಡು ವರ್ಷಗಳಲ್ಲಿ ಬಿಬಿಸಿ ಹೇಗೆ ಕುಸಿಯುತ್ತಿದೆ ಎಂಬುದನ್ನು ನೋಡುವುದು ನೋವು ತಂದಿದೆ. ನಾನು ಬಿಬಿಸಿಯ ಪರವಾಗಿ ನಿಲ್ಲುತ್ತಿದ್ದೆ. ಆದರೆ ಇವತ್ತು ಅದು ನಿಷ್ಪಕ್ಷಪಾತ ಸಂಸ್ಥೆ ಎಂದು ಹೇಳಲಿಕ್ಕೆ ಸಾಧ್ಯವಾಗುತ್ತಿಲ್ಲ," ಎಂದು ಲೈನ್ಕರ್ ವಿಷಾದ ವ್ಯಕ್ತಪಡಿಸಿದರು.

ಬಿಬಿಸಿ ಗಾಝಾ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡುವುದರಿಂದ ಪಕ್ಷಪಾತದ ಗ್ರಹಿಕೆ ಹುಟ್ಟಬಹುದೆಂದು ಅಂದಾಜಿಸಿ, ಸಂಪೂರ್ಣವಾಗಿ ಅದನ್ನು ಕೈಬಿಟ್ಟಿದೆ. ಆದರೆ ಈ ನಿರ್ಧಾರಕ್ಕೆ ಸಂಸ್ಥೆಯ ಒಳಗೇ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸುಮಾರು 100ಕ್ಕೂ ಹೆಚ್ಚು ಬಿಬಿಸಿ ಸಿಬ್ಬಂದಿ ಈ ನಿರ್ಧಾರವನ್ನು ವಿರೋಧಿಸಿದ್ದಾರೆ.

ಬಿಬಿಸಿ ಮಹಾನಿರ್ದೇಶಕ ಟಿಮ್ ಡೇವಿ ಈ ಕುರಿತು ನಡೆಯುತ್ತಿರುವ ಆಂತರಿಕ ಸಭೆಗಳಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಇಸ್ರೇಲ್ ಫೆಲೆಸ್ತೀನಿಯರ ಮೇಲೆ ಯುದ್ಧ ಅಪರಾಧ ಮತ್ತು ಜನಾಂಗೀಯ ಶುದ್ಧೀಕರಣ ನಡೆಸುತ್ತಿರುವ ರಾಕ್ಷಸ ರಾಜ್ಯ" ಎಂದು ಸಾಕ್ಷ್ಯಚಿತ್ರದ ನಿರೂಪಕಿ ರಮಿತಾ ನವೈ, ಬಿಬಿಸಿ ರೇಡಿಯೋ 4 ಟುಡೇ ಕಾರ್ಯಕ್ರಮದಲ್ಲಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News