ನೈಜೀರಿಯಾದಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟ: ಕನಿಷ್ಠ 70 ಮಂದಿ ಮೃತ್ಯು
Photo: X/@ArianaNews_
ಅಬುಜಾ: ನೈಜೀರಿಯಾದಲ್ಲಿ ಶನಿವಾರ ಸಂಭವಿಸಿದ ಪೆಟ್ರೋಲ್ ಟ್ಯಾಂಕರ್ ಟ್ರಕ್ ಸ್ಫೋಟ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 86ಕ್ಕೇರಿದೆ ಎಂದು ತುರ್ತು ಸೇವಾ ಇಲಾಖೆ ರವಿವಾರ ಹೇಳಿದೆ.
60,000 ಲೀಟರ್ ಗ್ಯಾಸೋಲಿನ್ ಸಾಗಿಸುತ್ತಿದ್ದ ಟ್ರಕ್ ಉತ್ತರ- ಮಧ್ಯ ನೈಜೀರಿಯಾದ ನೈಜರ್ ರಾಜ್ಯದ ಸುಲೆಜಾ ಪ್ರದೇಶದ ಬಳಿ ಶನಿವಾರ ಸ್ಫೋಟಗೊಂಡಿತ್ತು. ಜನರೇಟರ್ ಬಳಸಿ ಒಂದು ಟ್ರಕ್‍ನಿಂದ ಮತ್ತೊಂದು ಟ್ರಕ್‍ಗೆ ಗ್ಯಾಸೊಲಿನ್ ವರ್ಗಾಯಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ.
ಟ್ಯಾಂಕರ್ ನ ಚಾಲಕರು, ಗ್ಯಾಸ್ ವರ್ಗಾಯಿಸುತ್ತಿದ್ದ ಸಿಬ್ಬಂದಿ ಹಾಗೂ ಅಕ್ಕಪಕ್ಕದಲ್ಲಿ ಇದ್ದವರು ಸೇರಿದಂತೆ ಹಲವರು ಸಾವನ್ನಪ್ಪಿದ್ದವರು ತೀವ್ರ ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಇದುವರೆಗೆ 89 ಮೃತದೇಹಗಳು ಪತ್ತೆಯಾಗಿವೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ತುರ್ತು ಕಾರ್ಯ ನಿರ್ವಹಣಾ ಏಜೆನ್ಸಿಯ ಮುಖ್ಯಸ್ಥರು ಹೇಳಿದ್ದಾರೆ.