ಗಾಝಾ | ಇಸ್ರೇಲ್ ದಾಳಿಯಲ್ಲಿ 16 ಮಂದಿ ಮೃತ್ಯು; 15 ಮಂದಿಗೆ ಗಾಯ
Update: 2025-05-28 22:05 IST
ಸಾಂದರ್ಭಿಕ ಚಿತ್ರ | PC : NDTV
ಗಾಝಾ: ಗಾಝಾ ಪ್ರದೇಶದಾದ್ಯಂತ ಬುಧವಾರ ಬೆಳಗ್ಗಿನಿಂದ ಇಸ್ರೇಲ್‍ನ ವೈಮಾನಿಕ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿರುವುದಾಗಿ ನಾಗರಿಕ ಭದ್ರತಾ ಏಜೆನ್ಸಿಯ ವಕ್ತಾರರು ಹೇಳಿದ್ದಾರೆ.
ಮೃತರಲ್ಲಿ 9 ಮಂದಿ ಫೋಟೋ ಜರ್ನಲಿಸ್ಟ್ ಒಸಾಮಾ ಅಲ್-ಅರ್ಬೀದ್ ಅವರ ಕುಟುಂಬದ ಸದಸ್ಯರಾಗಿದ್ದಾರೆ. ಉತ್ತರ ಗಾಝಾದಲ್ಲಿರುವ ಅರ್ಬೀದ್ ಅವರ ಮನೆಗೆ ಬುಧವಾರ ಬೆಳಿಗಿನ ಜಾವ 2 ಗಂಟೆಗೆ ವೈಮಾನಿಕ ದಾಳಿ ನಡೆದಿದ್ದು ಅರ್ಬೀದ್ ಗಾಯಗೊಂಡಿದ್ದಾರೆ.
ಮಧ್ಯ ಗಾಝಾದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಒಂದೇ ಕುಟುಂಬದ 6 ಮಂದಿ ಮೃತಪಟ್ಟಿದ್ದು ಮಕ್ಕಳ ಸಹಿತ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.