×
Ad

ಗಾಝಾ: ಹಸಿವಿನಿಂದ 21 ಮಕ್ಕಳು ಮೃತ್ಯು

Update: 2025-07-22 21:29 IST

 Photo credit: WHO

ಗಾಝಾ: ಗಾಝಾ ಪಟ್ಟಿಯಾದ್ಯಂತ ಕಳೆದ 72 ಗಂಟೆಗಳಲ್ಲಿ 21 ಮಕ್ಕಳು ಹಸಿವೆ ಹಾಗೂ ಅಪೌಷ್ಟಿಕತೆಯಿಂದ ಸಾವನ್ನಪ್ಪಿರುವುದಾಗಿ ಗಾಝಾ ನಗರದಲ್ಲಿನ ಅಲ್-ಶಿಫಾ ಆಸ್ಪತ್ರೆಯ ಮುಖ್ಯಸ್ಥರು ಮಂಗಳವಾರ ಹೇಳಿದ್ದಾರೆ.

ಗಾಝಾ ನಗರದ ಅಲ್-ಶಿಫಾ ಆಸ್ಪತ್ರೆ, ಡೀರ್ ಅಲ್-ಬಲಾಹ್‍ನಲ್ಲಿರುವ ಅಖ್ಸಾ ಆಸ್ಪತ್ರೆ ಹಾಗೂ ಖಾನ್ ಯೂನಿಸ್ ನಗರದಲ್ಲಿರುವ ನಾಸೆರ್ ಆಸ್ಪತ್ರೆಗಳಲ್ಲಿ ಈ ಸಾವುಗಳು ಸಂಭವಿಸಿವೆ. ಆಹಾರ ಮತ್ತು ವೈದ್ಯಕೀಯ ಸರಬರಾಜು ಕೊರತೆಗಳ ಮಧ್ಯೆ ತೀವ್ರ ಅಪೌಷ್ಟಿಕತೆ ಮತ್ತು ಹಸಿವು ಸಂಬಂಧಿತ ತೊಡಕುಗಳಿಂದ ಮಕ್ಕಳ ಸಾವು ನೋವಿನ ಪ್ರಮಾಣ ಹೆಚ್ಚಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News