×
Ad

ಗಾಝಾಕ್ಕೆ ನೀರುಣಿಸುವ ಕೊಳವೆ ಮಾರ್ಗಕ್ಕೆ ಯುಎಇ ಚಾಲನೆ

Update: 2025-08-29 21:39 IST

Screengrab : x  \ @nivcalderon

ದುಬೈ, ಆ.29: ಈಜಿಪ್ಟ್ ನಲ್ಲಿರುವ ತನ್ನ ನಿರ್ಲವಣೀಕರಣ(ಉಪ್ಪು ನೀರನ್ನು ಶುದ್ಧೀಕರಿಸುವುದು) ಸ್ಥಾವರದಿಂದ ಗಾಝಾ ಪಟ್ಟಿಗೆ ಶುದ್ಧ ನೀರನ್ನು ತಲುಪಿಸುವ 7.5 ಕಿ.ಮೀ ಉದ್ದದ ಕೊಳವೆಮಾರ್ಗಕ್ಕೆ ಯುಎಇ ಶುಕ್ರವಾರ ಚಾಲನೆ ನೀಡಿದೆ.

2023ರಲ್ಲಿ ಇಸ್ರೇಲ್-ಹಮಾಸ್ ಯುದ್ಧ ಆರಂಭಗೊಂಡಂದಿನಿಂದ ಫೆಲೆಸ್ತೀನಿಯನ್ ಕುಟುಂಬಗಳಿಗೆ ಎದುರಾಗಿದ್ದ ಕುಡಿಯುವ ನೀರಿನ ತೀವ್ರ ಸಮಸ್ಯೆಗೆ ಇದು ಪರಿಹಾರ ಒದಗಿಸಲಿದೆ.

ಪ್ರತೀ ದಿನಾ ಸುಮಾರು 2 ದಶಲಕ್ಷ ಗ್ಯಾಲನ್ಸ್ ನೀರು ಸಾಗಿಸುವ ಸಾಮರ್ಥ್ಯವಿರುವ ಪೈಪ್‍ ಲೈನ್‍ ನಿಂದ ಸುಮಾರು 1 ದಶಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ. ಈಜಿಪ್ಟ್ ನಲ್ಲಿ ಯುಎಇ ಸ್ಥಾಪಿಸಿರುವ ನಿರ್ಲವಣೀಕರಣ ಸ್ಥಾವರದಿಂದ ಶುದ್ಧ ನೀರನ್ನು ಖಾನ್ ಯೂನಿಸ್ ನಗರದಲ್ಲಿರುವ ಅಲ್-ಬುರಾಖ್ ಜಲಾಶಯಕ್ಕೆ ಸಂಪರ್ಕಿಸುವ ಯೋಜನೆ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News