ಗಾಝಾ ಕದನ ವಿರಾಮದ ಕುರಿತ ವಿಶ್ವಸಂಸ್ಥೆಯ ನಿರ್ಣಯಕ್ಕೆ ಅಮೆರಿಕ ತಡೆ
Update: 2025-09-19 21:40 IST
PC : X
ವಿಶ್ವಸಂಸ್ಥೆ, ಸೆ.19: ಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ಆಗ್ರಹಿಸುವ ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯವನ್ನು ಅಮೆರಿಕ ಮತ್ತೊಮ್ಮೆ ವೀಟೊ ಪ್ರಯೋಗಿಸಿ ತಡೆಹಿಡಿದಿರುವುದಾಗಿ ವರದಿಯಾಗಿದೆ.
ಗಾಝಾದಲ್ಲಿನ ಮಾನವೀಯ ಪರಿಸ್ಥಿತಿ `ದುರಂತ' ಎಂದು ನಿರ್ಣಯದಲ್ಲಿ ಉಲ್ಲೇಖಿಸಿದ್ದು ಸಹಾಯದ ವಿತರಣೆಯಲ್ಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕುವಂತೆ ಇಸ್ರೇಲನ್ನು ಒತ್ತಾಯಿಸಲಾಗಿದೆ. ಇತರ ಎಲ್ಲಾ 14 ಸದಸ್ಯ ರಾಷ್ಟ್ರಗಳೂ ನಿರ್ಣಯವನ್ನು ಬೆಂಬಲಿಸಿದ್ದವು. ` ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಭಯೋತ್ಪಾದಕ ಸಂಘಟನೆಯೆಂದು ಗುರುತಿಸಿರುವ ಹಮಾಸ್ ಅನ್ನು ಸಮರ್ಪಕವಾಗಿ ಖಂಡಿಸಲು ವಿಫಲವಾದ ನಿರ್ಣಯ ಸ್ವೀಕಾರಾರ್ಹವಲ್ಲ' ಎಂದು ಅಮೆರಿಕದ ಪ್ರತಿನಿಧಿ ಮೋರ್ಗನ್ ಆರ್ಟೆಗಸ್ ಸಭೆಯನ್ನುದ್ದೇಶಿಸಿ ಹೇಳಿದರು. 2023ರಿಂದ ಗಾಝಾ ಕುರಿತ ಭದ್ರತಾ ಮಂಡಳಿ ನಿರ್ಣಯವನ್ನು ಅಮೆರಿಕ 6ನೇ ಬಾರಿ ತಡೆಹಿಡಿದಂತಾಗಿದೆ.