ಗಾಝಾ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ 19 ಮಂದಿ ಮೃತ್ಯು
Update: 2025-10-05 22:27 IST
ಸಾಂದರ್ಭಿಕ ಚಿತ್ರ | Photo Credit : aljazeera.com
ಗಾಝಾ, ಅ.5: ಗಾಝಾ ಪಟ್ಟಿಯಾದ್ಯಂತ ಶನಿವಾರ ರಾತ್ರಿ ಮತ್ತು ರವಿವಾರವೂ ಇಸ್ರೇಲ್‍ನ ಯುದ್ಧವಿಮಾನಗಳು ಹಾಗೂ ಟ್ಯಾಂಕ್‍ಗಳು ದಾಳಿ ಮುಂದುವರಿಸಿದ್ದು ಕನಿಷ್ಠ 19 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಗಾಝಾ ನಗರದಾದ್ಯಂತ ಗುರಿಗಳ ಮೇಲೆ ಇಸ್ರೇಲ್‍ನ ದಾಳಿಯಲ್ಲಿ ಹಲವಾರು ವಸತಿ ಕಟ್ಟಡಗಳು ನಾಶಗೊಂಡಿವೆ ಎಂದು ವರದಿ ಹೇಳಿದೆ.