ಗಾಝಾ ಶಾಂತಿ ಯೋಜನೆ : ಈಜಿಪ್ಟ್‌ನಲ್ಲಿ ಮಾತುಕತೆ
Update: 2025-10-05 21:46 IST
ಸಾಂದರ್ಭಿಕ ಚಿತ್ರ | Photo Credit : aljazeera.com
ಕೈರೋ, ಅ.5: ಗಾಝಾದಲ್ಲಿ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದ ಗಾಝಾ ಶಾಂತಿ ಯೋಜನೆಯ ಬಗ್ಗೆ ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ರಾಜಧಾನಿ ಕೈರೋದಲ್ಲಿ ಸೋಮವಾರ (ಅಕ್ಟೋಬರ್ 6) ಮಾತುಕತೆ ಆರಂಭಗೊಳ್ಳಲಿದೆ ಎಂದು `ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.
ಮಾತುಕತೆಯಲ್ಲಿ ಅಮೆರಿಕಾ ನಿಯೋಗದ ನೇತೃತ್ವವನ್ನು ಟ್ರಂಪ್ ಅವರ ಅಳಿಯ ಜೆರೆಡ್ ಕುಶ್ನರ್ ಮತ್ತು ಪಶ್ಚಿಮ ಏಶ್ಯಾ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ವಹಿಸಲಿದ್ದಾರೆ. ತಾಂತ್ರಿಕ ವಿವರಗಳನ್ನು ಅಂತಿಮಗೊಳಿಸಲು ಇಸ್ರೇಲ್‍ನ ನಿಯೋಗವೂ ಈಜಿಪ್ಟ್‌ಗೆ ಹೋಗುತ್ತಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವಿವಾರ ಹೇಳಿದ್ದಾರೆ.
ಹಮಾಸ್‍ನ ನಿಯೋಗವೂ ಮಾತುಕತೆಯಲ್ಲಿ ಪಾಲ್ಗೊಳ್ಳಲಿದೆ. ಗಾಝಾದಲ್ಲಿ ಯುದ್ಧ ನಂತರದ ಭವಿಷ್ಯದ ಬಗ್ಗೆ ಚರ್ಚಿಸಲು ಕೈರೋದಲ್ಲಿ ಫೆಲೆಸ್ತೀನ್ ಬಣಗಳ ವ್ಯಾಪಕ ಸಮಾವೇಶವನ್ನೂ ಆಯೋಜಿಸಲಾಗುವುದು ಎಂದು ಈಜಿಪ್ಟ್ ವಿದೇಶಾಂಗ ಇಲಾಖೆ ಹೇಳಿದೆ.