×
Ad

ಜರ್ಮನಿ ಸಾರ್ವತ್ರಿಕ ಚುನಾವಣೆ: ಸಿಡಿಯು-ಸಿಎಸ್ಯು ಮೈತ್ರಿಕೂಟಕ್ಕೆ ಗೆಲುವು

Update: 2025-02-24 22:56 IST

Photo Credit : AP

ಬರ್ಲಿನ್: ಜರ್ಮನಿಯ ಸಾರ್ವತ್ರಿಕ ಚುನಾವಣೆಯಲ್ಲಿ ಫ್ರೆಡ್ರಿಕ್ ಮೆರ್ಝ್ ನೇತೃತ್ವದ ಸಿಡಿಯು-ಸಿಎಸ್ಯು ಮೈತ್ರಿಕೂಟ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಹಾಲಿ ಛಾನ್ಸಲರ್ ಒಲಾಫ್ ಶ್ಹಾಲ್ಜ್ ಪಕ್ಷಕ್ಕೆ ಹಿನ್ನಡೆಯಾಗಿರುವುದಾಗಿ ವರದಿಯಾಗಿದೆ.

ಚುನಾವಣಾ ಪ್ರಾಧಿಕಾರ ಬಿಡುಗಡೆಗೊಳಿಸಿದ ಫಲಿತಾಂಶದ ಪ್ರಕಾರ ಮೆರ್ಝ್ ಅವರ ಕ್ರಿಶ್ಚಿಯನ್ ಡೆಮಾಕ್ರಾಟ್ಸ್ ಪಕ್ಷ 630 ಸದಸ್ಯ ಬಲದ ಸಂಸತ್ನಲ್ಲಿ 208 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಮೂಡಿಬಂದಿದೆ. ಆಲ್ಟರ್ನೇಟಿವ್ ಫಾರ್ ಜರ್ಮನಿ(ಎಎಫ್ಡಿ) ಪಕ್ಷ 152 ಸ್ಥಾನಗಳನ್ನು ಗೆದ್ದರೆ, ಹಾಲಿ ಛಾನ್ಸಲರ್ ಒಲಾಫ್ ಶ್ಹಾಲ್ಝ್ ಅವರ ಸೋಷಿಯಲ್ ಡೆಮಾಕ್ರಟಿಕ್ ಪಕ್ಷ 120 ಸ್ಥಾನಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ. ಈ ಹಿಂದಿನ ಆಡಳಿತಾರೂಢ ಒಕ್ಕೂಟದ ಅಂಗಪಕ್ಷವಾಗಿದ್ದ ಗ್ರೀನ್ಸ್ ಪಕ್ಷ 85 ಸ್ಥಾನ ಗಳಿಸಿದ್ದರೆ ಎಡಪಕ್ಷ 64 ಸ್ಥಾನ ಪಡೆದಿವೆ. ಮುಂದಿನ ಈಸ್ಟರ್ ಒಳಗೆ ಸರಕಾರ ರಚಿಸುವುದಾಗಿ ಫ್ರೆಡ್ರಿಕ್ ಮೆರ್ಝ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News