×
Ad

ಖತರ್‌ ಜೆಟ್ ಕುರಿತ ಪ್ರಶ್ನೆಗೆ ಸಿಟ್ಟಿಗೆದ್ದ ಟ್ರಂಪ್; ವರದಿಗಾರನಿಗೆ ʼಗೆಟ್ ಔಟ್ʼ ಎಂದ ಅಮೆರಿಕ ಅಧ್ಯಕ್ಷ

Update: 2025-05-22 12:10 IST

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)

ವಾಷಿಂಗ್ಟನ್: ಖತರ್‌ ಬೋಯಿಂಗ್ 747 ವಿಮಾನವನ್ನು ಭವಿಷ್ಯದ ಏರ್ ಫೋರ್ಸ್ ಒನ್ ವಿಮಾನವನ್ನಾಗಿ ಪರಿವರ್ತಿಸಲಾಗುವುದು ಎಂಬ ಇತ್ತೀಚಿನ ಪೆಂಟಗನ್ ಪ್ರಕಟಣೆಯ ಕುರಿತ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಬುಧವಾರ ನಿರಾಕರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಕುರಿತು ಪ್ರಶ್ನೆ ಕೇಳಿದ NBC ಸುದ್ದಿ ವಾಹಿನಿಯ ವರದಿಗಾರನ ವಿರುದ್ಧ ವಾಗ್ದಾಳಿ ನಡೆಸಿ ‌ʼಗೆಟ್‌ ಔಟ್ʼ ಎಂದ ಘಟನೆ ನಡೆದಿದೆ.

ಶ್ವೇತ ಭವನದಲ್ಲಿ ನಡೆದ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಮಫೋಸಾರೊಂದಿಗಿನ ಮಾತುಕತೆಯ ವೇಳೆ, "ದಕ್ಷಿಣ ಆಫ್ರಿಕಾದಲ್ಲಿನ ಬಿಳಿಯ ರೈತರ ವಿರುದ್ಧ ಹಿಂಸೆ ಹಾಗೂ ಜನಾಂಗೀಯವಾದಿ ಕಾನೂನಿನಂತಹ ಅತ್ಯಂತ ಗಂಭೀರ ವಿಷಯಗಳಿಂದ ನೀವು ಗಮನವನ್ನು ಬೇರೆಡೆ ಸೆಳೆಯುತ್ತಿದ್ದೀರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವರದಿಗಾರರನ್ನು ದೂಷಿಸಿದರು.

ಇದೇ ವೇಳೆ, ಎನ್‌ಬಿಸಿ ಸುದ್ದಿ ಸಂಸ್ಥೆ ಹಾಗೂ ಅದರ ಮಾತೃ ಸಂಸ್ಥೆಯ ಸಿಇಒ ಮತ್ತು ಅಧ್ಯಕ್ಷ ಬ್ರಿಯಾನ್ ರಾಬರ್ಟ್ಸ್‌ರ ಕಾರ್ಯಾಚರಣೆಗಳ ಕುರಿತು ತನಿಖೆ ನಡೆಯಬೇಕಿದೆ ಹಾಗೂ ಈ ಸುದ್ದಿ ಜಾಲವು ಅಪಮಾನಕಾರಿಯಾಗಿದೆ ಎಂದೂ ಅವರು ಹರಿಹಾಯ್ದಿದ್ದಾರೆ.

"ನೀವು ಯಾವುದರ ಕುರಿತು ಮಾತನಾಡುತ್ತಿದ್ದೀರಿ? ನಿಮಗೆ ತಿಳಿದಿದೆಯೆ? ಈ ಮಾತುಕತೆಗೂ ಖತರ್ ಜೆಟ್ ವಿಮಾನಕ್ಕೂ ಏನು ಸಂಬಂಧ? ಅವರು ಅಮೆರಿಕ ವಾಯುಪಡೆಗೆ ಒಂದು ಜೆಟ್ ವಿಮಾನವನ್ನು ನೀಡುತ್ತಿದ್ದಾರೆ. ಇದು ಅದ್ಭುತ ಸಂಗತಿ. ನಾವಿಲ್ಲಿ ಸಾಕಷ್ಟು ವಿಷಯಗಳ ಕುರಿತು ಮಾತನಾಡುತ್ತಿದ್ದೇವೆ. ಆದರೆ, ನೀವೇ ನೋಡಿದಂತೆ ಎನ್‌ಬಿಸಿ ಸುದ್ದಿ ಸಂಸ್ಥೆಯು ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದೆ. ನೀವೊಬ್ಬ ಭಯಂಕರ ವರದಿಗಾರ. ನಿಮಗೆ ವರದಿಗಾರನಿಗಿರಬೇಕಾದ ಯಾವುದೇ ಅರ್ಹತೆಯಿಲ್ಲ." ಎಂದು ಡೊನಾಲ್ಡ್ ಟ್ರಂಪ್ ಅವರು ಎನ್‌ಬಿಸಿ ಸುದ್ದಿ ವಾಹಿನಿಯ ವರದಿಗಾರನ ವಿರುದ್ಧ ಕಿಡಿ ಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News